ಫೋನ್ ಕದ್ದಾಲಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆ.15- ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ಒಂದೊಮ್ಮೆ ಟ್ಯಾಪಿಂಗ್ ಮಾಡಿದ್ದರೆ ಈಗ ಅದರ ಬಗ್ಗೆ ತನಿಖೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಸರಿ ಅವರಿಗೆ ಶಿಕ್ಷೆಯಾಗಲಿ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಫೋನ್ ಕದ್ಧಾಲಿಕೆ ಬಗ್ಗೆ ನನಗೆ ಗೊತ್ತಿಲ್ಲ; ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ಮಾಡಿಸಲಿ.ಫೋನ್ ಕದ್ಧಾಲಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ ಎಂದು ಹೇಳಿದರು.

ದೇಶದ ಐಕ್ಯತೆ, ಸಾಮಾಜಿಕತೆ ಉಳಿಸಬೇಕು 72ನೇ ವರ್ಷಾಚರಣೆ ಮುಗಿಸಿ 73ನೇ ಸ್ವಾತಂತ್ರ್ಯ ದಿನವನ್ನ ಆಚರಿಸುತ್ತಿದ್ದೇವೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ.ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆಯಿಲ್ಲ. ಅಂತವರು ಅಧಿಕಾರಕ್ಕೆ ಬಂದಾಗ ಇಂಥ ಪರಿಸ್ಥಿತಿ ಬರಲಿದೆ.ನಾವೆಲ್ಲರೂ ಪ್ರತಿಜ್ಞೆಯನ್ನು ಮಾಡಬೇಕು.

ಪ್ರಜಾಪ್ರಭುತ್ವವನ್ನ ನಾವು ಉಳಿಸುವ ಕೆಲಸ ಮಾಡಬೇಕು.ದೇಶದ ಐಕ್ಯತೆ,ಸಾಮಾಜಿಕತೆ ಉಳಿಸಬೇಕು ಎಂದರು.ಹುತಾತ್ಮರಾದ ಗಾಂಧೀಜಿ, ಸರ್ದಾರ್ ವಲ್ಲಭಾಯ್ ಪಟೇಲ್, ಆಜಾದ್, ನೆಹರೂ ಹೀಗೆ ಅನೇಕರು ತಮ್ಮ ಪ್ರಾಣ ಕಳೆದುಕೊಂಡು ಸ್ವಾತಂತ್ರ ಕೊಡಿಸಿದ್ದಾರೆ. ಇವತ್ತು ಎಲ್ಲ ಹುತಾತ್ಮರನ್ನು ನಾವೆಲ್ಲ ಸ್ಮರಿಸಿಕೊಂಡು ಅವರಿಂದ ಸ್ಪೂರ್ತಿ ಪಡೆಯಬೇಕು.ಐಕ್ಯತೆ, ಸಾರ್ವಭೌಮತೆ, ಪರಧರ್ಮ ಸಹಿಷ್ಣುತೆ ಯನ್ನ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಇದಕ್ಕೂ ಮುನ್ನಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದೇಶದಲ್ಲಿ ಭಯ ಮತ್ತು ವೈಷಮ್ಯದ ವಾತಾವರಣ ಸೃಷ್ಟಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.ದೇಶದ ಮೂಲ ಬುನಾದಿಯಾದ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆ ತರುವ ಕೆಲಸವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ಇದರ ವಿರುದ್ಧ ಹೋರಾಡಲು ಮತ್ತು ಎಲ್ಲಾ ತ್ಯಾಗ ಬಲಿದಾನಕ್ಕೂಸಿದ್ಧವಾಗುವ ಸಂಕಲ್ಪವನ್ನು ಕಾಂಗ್ರೆಸ್ ಕಾರ್ಯಕರ್ತರು ಕೈಗೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ. ಭಾವನಾತ್ಮಕ ವಿಷಯಗಳನ್ನು ಕೆದಕಿ, ಸುಳ್ಳು ಮಾಹಿತಿಗಳನ್ನು ಪ್ರಚುರ ಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಮೂಲಕ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲವಾಗಿಸಲು ನಿರಂತರ ಪ್ರಯತ್ನಿಸುತ್ತಿದೆ.ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿಯನ್ನು ದಮನ ಮಾಡುವ, ಟೀಕೆ-ಟಿಪ್ಪಣೆ ಮಾಡುವವರನ್ನು ಹತ್ತಿಕ್ಕುವ ಪ್ರವೃತ್ತಿ ಬೆಳೆಯುತ್ತಿದೆ.ಸರ್ಕಾರದ ವಿರುದ್ಧ ಮಾತನಾಡುವ ರಾಜಕೀಯ ಪಕ್ಷಗಳನ್ನು ಹಣಿಯಲಾಗುತ್ತಿದೆ.ಆ ಪಕ್ಷಗಳ ಮುಖಂಡರನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ.ಒಂದೇ ಪಕ್ಷ, ಒಂದೇ ಧರ್ಮ, ಒಂದೇ ವ್ಯವಸ್ಥೆ ಇರಬೇಕು ಎಂಬ ಕೋಮುವಾದಿ ಸಿದ್ಧಾಂತದ ಪಕ್ಷ ದೇಶದ ಚುಕ್ಕಾಣಿ ಹಿಡಿದಿರುವುದು ಅತ್ಯಂತ ಗಂಭೀರ ವಿಷಯ.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಎಲ್ಲಾರಿಗೂ ಸಮಾನ ಅವಕಾಶ ಸಿಗಬೇಕು, ಪ್ರಜಾಪ್ರಭುತ್ವ ಉಳಿಯಬೇಕು ಎಂಬ ಉದ್ದೇಶಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ, ದೇಶದ ಈಗಿನ ಸವಾಲನ್ನು ಬಹಳ ಧೈರ್ಯದಿಂದ ಸ್ವೀಕರಿಸಲಿದೆ.ಪಕ್ಷದ ಕಾರ್ಯಕರ್ತರು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಸ್ವಾರ್ಥದಿಂದ ಹೊರಬಂದು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಲು ಸನ್ನದ್ಧರಾಗಬೇಕು.ದೇಶದ ಮೂಲಭೂತ ಮೌಲ್ಯಗಳ ರಕ್ಷಣೆಗೆ ಕಟಿಬದ್ಧರಾಗಬೇಕು.ನಮ್ಮ ಪೂರ್ವಜನರು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಮಾಡಿದ ತ್ಯಾಗ ಬಲಿದಾನದ ಮಾದರಿಯಲ್ಲಿ ನಾವು ಕೂಡ ಎಲ್ಲಾ ರೀತಿಯ ತ್ಯಾಗ, ಬಲಿದಾನ ಮಾಡುವುದಾಗಿ ಸ್ವಾತಂತ್ರ್ಯದ ಈ ದಿನದಲ್ಲಿ ನಾವು ಸಂಕಲ್ಪ ತೊಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ