ನವದೆಹಲಿ, ಮಾ.31- ಭಾರತದ ಎಚ್ಚರಿಕೆ ನಡುವೆಯೇ ಚೀನಾ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಗಡಿಯಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದು, ಉದ್ವಿಗ್ನ ಸ್ಥಿತಿ ನೆಲೆಸಿದೆ. ಅರುಣಾಚಲ ಪ್ರದೇಶದ ಇಂಡೋ-ಚೀನಾ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಹಲವಾರು ಮನೆಗಳೊಂದಿಗೆ ಹೊಸ ಶಿಬಿರವನ್ನು ಸ್ಥಾಪಿಸಿದೆ. ಈ ಬೆಳವಣಿಗೆಯಿಂದ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹಳಸುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶದ ಅನ್ಜೌ ಜಿಲ್ಲೆಯ್ ಕಿಬಿತು ಪಟ್ಟಣದ ಇನ್ನೊಂದು ಪಾಶ್ರ್ವದಲ್ಲಿರುವ ಟಟು ಬಳಿ ಈ ಹೊಸ ನಿರ್ಮಾಣಗಳು ತಲೆ ಎತ್ತಿವೆ.