ನವದೆಹಲಿ,ಆ.13- ಭಾರತೀಯ ಸಂವಿಧಾನದ 370ನೇ ವಿಧಿ ರದ್ಧುಗೊಳಿಸಿದ ನಂತರ ಕಾಶ್ಮೀರ ಪ್ರಾಂತ್ಯದಲ್ಲಿ ಭದ್ರತೆ ವಿಷಯದಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳು ಸರ್ವಸನ್ನದ್ಧವಾಗಿದೆ ಎಂದು ಭೂ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.
370ನೇ ವಿಧಿ ರದ್ಧು ಹಾಗೂ ಜಮ್ಮು ಮತ್ತು ಪ್ರಾಂತ್ಯವನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ನಂತರ ಕಣಿವೆ ಪ್ರಾಂತ್ಯದ ಗಡಿನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನಾಪಡೆಗಳ ಜಮಾವಣೆ ಹೆಚ್ಚಾಗುತ್ತಿದೆ. ವರದಿಗಳ ಹಿನ್ನೆಲೆಯಲ್ಲಿ ಜನರಲ್ ರಾವತ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ವಿಷಯದಲ್ಲಿ ಮತ್ತು ಅದರ ಭದ್ರತೆ ವಿಚಾರದಲ್ಲಿ ಎದುರಾಗಬಹುದಾದ ಯಾವುದೇ ಸವಾಲಗಳನ್ನು ಸಮರ್ಥಿಸಲು ನಮ್ಮ ಸೇನಾಪಡೆಗಳು ಸರ್ವ ರೀತಿಯಲ್ಲೂ ಸಜ್ಜಾಗಿವೆ ಎಂದು ತಿಳಿಸಿದರು.