ಬೆಂಗಳೂರು, ಆ.11- ನೆರೆ ಸಂತ್ರಸ್ತರಿಗೆ ನೆರವಾಗುವ ನೆಪದಲ್ಲಿ ಅನಗತ್ಯ ವಸ್ತುಗಳನ್ನು ನೀಡುವ ಬದಲು ಅಗತ್ಯ ವಸ್ತುಗಳನ್ನು ನೀಡುವುದು ಸೂಕ್ತವಾಗಿದ್ದು, ಜನಾವಶ್ಯಕ ವಸ್ತುಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಪ್ರಕಟಣೆಯೊಂದನ್ನು ಹೊರಡಿಸಿದೆ.
ನೆರೆ ಸಂತ್ರಸ್ತರಿಗೆ ನೆರವಾಗಲು ಜನಪ್ರತಿನಿಧಿಗಳು, ಸಂಘಟನೆಗಳು ಮತ್ತು ಜನಸಾಮಾನ್ಯರು ನೀಡಿದ್ದ ಸಹಕಾರಕ್ಕೆ ಧನ್ಯವಾದ ಹೇಳಿರುವ ಕೊಡಗು ಜಿಲ್ಲಾಡಳಿತ, ಇನ್ನು ಮುಂದೆ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವವರಿಗೆ ಅಡುಗೆ ಸಾಮಾನುಗಳು, ಗ್ಯಾಸ್ ಸ್ಟೌವ್‍ಗಳು, ಪ್ಲ್ಯಾಸ್ಟಿಕ್ ಬಕೇಟ್, ಮಗ್ಗುಗಳು, ರೈನ್‍ಕೋಟ್, ಬೆಚ್ಚನೆ ಉಡುಪುಗಳು, ದಿನಬಳಕೆ ಬಟ್ಟೆಗಳು, ಗ್ಲೌಸ್, ಮಾಸ್ಕ್, ಪ್ಲ್ಯಾಸ್ಟಿಕ್ ಮ್ಯಾಟ್, ಛತ್ರಿಗಳು, ಬೆಡ್‍ಶೀಟ್, ತಲೆ ದಿಂಬುಗಳು, ಸೊಳ್ಳೆ ಪರದೆಗಳು, ಅಡುಗೆ ಎಣ್ಣೆ, ಟಾರ್ಚ್‍ಗಳು, ಡಸ್ಟ್‍ಬೀನ್‍ಗಳು, ನೆಲ ಹೊರೆಸುವ ಸಲಕರಣೆಗಳು, ಡೆಟಾಯಿಲ್, ನೈರ್ಮಲೀಕರಣ ವಸ್ತುಗಳು, ಮೆಣದ ಬತ್ತಿಗಳು, ಟವೆಲ್‍ಗಳು, ಸ್ಕೂಲ್ ಬ್ಯಾಗ್‍ಗಳು, ಪ್ರಥಮಾ ಚಿಕಿತ್ಸಾ ಸಕಲಕರಣೆಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.