ಕೊಹ್ಲಿಗೆ ಡೋಂಟ್ ಕೇರ್  ಎಂದ  ಸಲಹಾ  ಸಮಿತಿ: ಕ್ಯಾಪ್ಟನ್ ಕೊಹ್ಲಿಗೆ ಶಾಕ್ ಕೊಟ್ಟಿದ್ದು  ಯಾರು  ?

ಟೀಮ್ ಇಂಡಿಯಾ ಕ್ಯಾಪ್ಟನ್  ವಿರಾಟ್  ಕೊಹ್ಲಿಗೆ  ಬಿಸಿಸಿಐನ ನೂತನ ಸಲಹಾ ಸಮಿತಿ  ಶಾಕ್  ಕೊಟ್ಟಿದೆ.  ಸದ್ಯ  ವಿರಾಟ್  ಕೊಹ್ಲಿ  ನೇತೃತ್ವದ  ಟೀಮ್  ಇಂಡಿಯಾ  ಈಗಾಗಲೇ  ವಿಂಡೀಸ್  ಸರಣಿ  ಆಡಲು  ಕೆರೆಬಿಯನ್ನರ  ನಾಡಿಗೆ ತಲುಪಿದೆ. ವಿಶ್ವಕಪ್  ಸೋಲಿನ ಬಳಿಕ  ಇದೇ  ಮೊದಲ  ಬಾರಿಗೆ  ಸರಣಿ ಆಡಲು ಹೊರಟಿರುವ  ಕ್ಯಾಪ್ಟನ್  ಕೊಹ್ಲಿಗೆ ಬಿಸಿಸಿಐನ ನೂತನ ಸಲಹಾ ಸಮಿತಿ  ಶಾಕ್  ಕೊಟ್ಟಿದೆ ಆ  ಶಾಕ್  ಏನು ಅನ್ನೋದನ್ನ  ತೋರಿಸ್ತೀವಿ  ನೋಡಿ.

 

 

 

 

 

 

 

 

 

 

 

 

 

 

ಮೊನ್ನೆಯಷ್ಟೆ  ವಿಂಡೀಸ್  ಪ್ರವಾಸ  ಕೈಗೊಳ್ಳುವ ಮುನ್ನ   ಕ್ಯಾಪ್ಟನ್  ಕೊಹ್ಲಿ  ಕೋಚ್  ಕುರಿತು ಕೇಳಿದ ಪ್ರಶ್ನೆಗೆ  ಸಲಹಾ ಸಮಿತಿ ಏನಾದ್ರು  ನನ್ನ  ಬಳಿ ಸಲಹೆ ಕೇಳಿದ್ರೆ  ನಾನು  ರವಿಶಾಸ್ತ್ರಿ ಅವರು ಮುಖ್ಯ ಕೋಚ್‌ ಆಗಿ ಮುಂದುವರಿಯಲಿ  ಎಂದು  ಹೇಳುತ್ತೇನೆ.  ಇಡೀ  ತಂಡ  ರವಿ  ಶಾಸ್ತ್ರಿ  ಅವರ ಬಗ್ಗೆ ಗೌರವ ಹೊಂದಿದೆ ಎಂದು  ಗುರುವನ್ನ  ಕೊಹ್ಲಿ  ಹೊಗಳಿದ್ದೆ  ಹೊಗಳಿದ್ದು…

ಕ್ಯಾಪ್ಟನ್  ಕೊಹ್ಲಿ  ಹೀಗೆ  ಹೇಳೊದರ ಹಿಂದೆ ಒಂದು ಕಾರಣ ಇದೆ.  ನೂತನ  ಸಲಹಾ  ಸಮಿತಿಯ  ಸದಸ್ಯ  ಅಂಶ್ಮುನ್  ಗಾಯಕ್ವಡ್  ಕೆಲವು  ದಿನಗಳ  ಹಿಂದೆಯಷ್ಟೆ  ಕೋಚ್  ರವಿ ಶಾಸ್ತ್ರಿಯನ್ನ  ಹಾಡಿ  ಹೊಗಳಿದ್ರು. ಇವರ ಈ  ಒಂದು  ಹೇಳಿಕೆ  ಭಾರೀ  ಸಂಚಲನ ಮೂಡಿಸಿ ರವಿ ಶಾಸ್ತ್ರಿ  ಮತ್ತೆ ಕೋಚ್  ಆಗ್ತಾರೆ ಅಂತ  ಎಲ್ಲರೂ  ಭಾವಿಸಿದ್ರು.

ಕೊಹ್ಲಿಗೆ ಶಾಕ್  ಕೊಟ್ಟ  ಸಲಹಾ ಸಮಿತಿ  

ಸಲಹಾ  ಸಮಿತಿಯ  ಸದಸ್ಯ  ಅಂಶ್ಮುನ್  ಗಾಯಕ್ವಡ್  ಕೋಚ್  ರವಿ  ಶಾಸ್ತ್ರಿಯನ್ನ  ಹಾಡಿ  ಹೊಗಳಿದ್ರು.  ಇದಿರಿಂದ ಫುಲ್  ಖುಷಿಯಾದ  ಕೊಹ್ಲಿ  ಸಂತೋಷಕ್ಕೆ  ಪಾರವೇ ಇರಲಿಲ್ಲ. ಶಾಸ್ತ್ರಿ  ಮತ್ತೆ ಕೋಚ್  ಹಾಗಿ  ಬರ್ತಾರೆ ಅನ್ನೋ ಖುಷಿಯಲ್ಲಿ  ಕೊಹ್ಲಿ  ಕೂಡ  ಶಾಸ್ತ್ರಿ  ಬಗ್ಗೆ  ಹಾಡಿ  ಹೊಗಳಿದ್ರು. ಆದರೆ  ಕೊಹ್ಲಿ   ಶಾಸ್ತ್ರಿ  ಕೋಚ್ ಆಗಿ  ಮುಂದುವರೆಯಲಿ ಎಂದು  ಹೇಳಿದ  ಬೆನ್ನಲ್ಲೆ  ಸಲಹಾ ಸಮಿತಿ  ಕೊಹ್ಲಿಗೆ  ಶಾಕ್  ಕೊಟ್ಟಿದೆ.

 

 

 

 

 

 

 

 

 

 

 

 

 

 

ಶಾಸ್ತ್ರಿ  ಕೋಚ್ ಆಗಿ  ಮುಂದುವರೆಯಲಿ ಎಂದು  ಬೆನ್ನಲ್ಲೆ  ಕ್ಯಾಪ್ಟನ್  ಕೊಹ್ಲಿಗೆ  ಅರಗಿಸಿಕೊಳ್ಳದ ಹಾಗೆ  ಏಟು  ಕೊಟ್ಟಿದೆ.  ಸಲಹಾ  ಸಮಿತಿ ಬಂದು ನನ್ನ  ಬಳಿ  ಸಲಹೆಯನ್ನ  ಕೇಳ್ತಾರೆ  ಎಂದು ಭಾವಿಸಿದ್ದ  ವಿರಾಟ್​ಗೆ  ಸಲಹಾ ಸಮಿತಿ ಸರಿಯಾಗೆ ಡಿಚ್ಚಿ ಕೊಟ್ಟಿದೆ. ಕೊಹ್ಲಿ ಏನ್ ಹೇಳಿದ್ರು ನಾವ್ ತಲೆ ಕೆಡಿಸಿಕೊಳ್ಳಲ್ಲನಾಯಕ ಏನು ಬೇಕಾದ್ರು ಹೇಳಬಹುದು.  ನಾವು ಇದರ ಬಗ್ಗೆ  ತಲೆ ಕೆಡಿಸಿಕೊಳ್ಳಲ್ಲ. ನಾವು  ಸಮಿತಿ . ಇದು ವಿರಾಟ್  ಅಭಿಪ್ರಾಯ ಅಷ್ಟೆ. ಇದನ್ನ  ಬಿಸಿಸಿಐ ಪರಿಗಣನೆಗೆ  ತೆಗೆದುಕೊಳ್ಳುತ್ತೆ ಎಂದು ಅಂಶ್ಮುನ್  ಗಾಯಕ್ವಡ್ ಖಾರವಾಗಿ ನುಡಿದಿದ್ದಾರೆ.

ಹೊಸ ಕೋಚ್​ಗೆ ಮಣೆ ಹಾಕುತ್ತಾ  ಸಲಹಾ  ಸಮಿತಿ  ?

ಮೊನ್ನೆ ಮೊನ್ನೆಯಷ್ಟೆ  ರವಿ ಶಾಸ್ತ್ರಿಯನ್ನ ಹಾಡಿ ಹೊಗಳಿ ಇದೀಗ  ಸಲಹಾ  ಸಮಿತಿ  ಯು ಟರ್ನ್  ಹೊಡೆದಿದ್ದು  ನೋಡಿದ್ರೆ  ರವಿ ಶಾಸ್ತ್ರಿಯನ್ನ ಕೈಬಿಟ್ಟು  ಹೊಸ  ಕೋಚ್​ಗೆ  ಕಪಿಲ್  ಅಂಡ್  ಟೀಮ್  ಮಣೆ ಹಾಕುತ್ತಾ  ಅನ್ನೋದನ್ನ  ಕಾದು ನೋಡಬೇಕಿದೆ. ಒಟ್ಟಿನಲ್ಲಿ  ತಮ್ಮ  ಗುರು  ಮತ್ತೆ  ಕೋಚ್  ಆಗ್ತಾರೆ  ಅಂತ  ಶಿಷ್ಯಾ  ಕೊಹ್ಲಿಗೆ  ಸಲಹಾ  ಸಮಿತಿ  ಸರಿಯಾಗೆ ಬಿಸಿ  ಮುಟ್ಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ