ಗಡಿ ಕಾಯುತ್ತಿದ್ದಾರೆ ಚಾಂಪಿಯನ್  ಪ್ಲೇಯರ್ ಧೋನಿ: ಮ್ಯಾಚ್​​ ಫಿನಿಷರ್​​, ಈಗ ಟೆರರ್​​ ಫಿನಿಷರ್..!

ಭಾರತಕ್ಕೆ  ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಪರಾಕ್ರಮಿ ನಾಯಕ, ವಿಕೆಟ್‌ ಹಿಂದೆ ನೂರಾರು ವಿಕೆಟ್‌ ಉರುಳಿಸಿದ ಸಾಧಕ, ಎಂತಹ ಕಠಿಣ ಸಂದರ್ಭದಲ್ಲೂ ತಂಡವನ್ನ  ಸೋಲಿನ ಸುಳಿಯಿಂದ ಗೆಲುವಿನ ದಡ ಸೇರಿಸಬಲ್ಲ ಸರ್ವಶ್ರೇಷ್ಠ ಫಿನಿಷರ್‌.. , ಸೆಕೆಂಡಿನ ನೂರು ಪಾಲಿಗಿಂತಲೂ ವೇಗವಾಗಿ ಸ್ಟಂಪ್‌ ಮಾಡುವ ಅವರ ವೇಗ, ಅವರ ಹೆಲಿಕಾಪ್ಟರ್‌ ಶಾಟ್‌ಗಳಿಗೆ, ಸಿಡಿಯುವ ಸಿಕ್ಸರ್‌ಗಳಿಗೆ ಜಗತ್ತೇ ನಿಬ್ಬೆರಗಾಗಿದೆ.  ಒಬ್ಬ ಮೆಂಟರ್‌ ಆಗಿ, ಹಿರಿಯಣ್ಣನಾಗಿ ವಿಕೆಟ್‌ ಹಿಂದೆ ನಿಂತು ವಿರಾಟ್‌ ಕೊಹ್ಲಿಯ ಹೆಗಲಿಗೆ ನಿಲ್ಲೋ ಧೋನಿ. ತನ್ನ ತಂಡವಷ್ಟೇ ಆಲ್ಲ, ಇತರ ತಂಡಗಳಿಗೂ ಮಾರ್ಗದರ್ಶನ ನೀಡಬಲ್ಲ ಗುರು ಇದೀಗ ಗಡಿಯಲ್ಲಿ  15  ದಿನಗಳ  ಕಾಲ  ದೇಶವನ್ನ ಕಾಯುತ್ತಿದ್ದಾರೆ.

ಕರ್ನಲ್‌ ಹುದ್ದೆಯನ್ನ ಗೌರವವೆಂದಷ್ಟೇ ಸ್ವೀಕರಿಸಲಿಲ್ಲ ಧೋನಿ :ಕ್ರಿಕೆಟ್​​ನ ಮಹಾಸಾಧನೆಗಾಗಿ ಧೋನಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನ ನೀಡಿತ್ತು. ಆ ದಿನ ವಿಶ್ವ ಕಪ್‌ ಗೆಲುವಿಗಿಂತ ದೊಡ್ಡ ಸಾಧನೆ ಎಂದು ಸಮವಸ್ತ್ರವನ್ನು ಕಣ್ಣಿಗೊತ್ತಿಕೊಂಡಿದ್ದರು. ಪದ್ಮ ಭೂಷಣ ಪ್ರಶಸ್ತಿ ಸ್ವೀಕರಕ್ಕೆ ಬಂದಾಗಲೂ ಧೋನಿಯೊಳಗೆ ಕಂಡಿದ್ದು ಕ್ರಿಕೆಟರ್‌ ಅಲ್ಲ, ದೇಶಕ್ಕಾಗಿ ಪಣ ತೊಟ್ಟ ಸೈನಿಕ. ಸೇನೆಗೆ ಯುವಕರನ್ನು ಸೆಳೆಯಲು ಕೆಲ ಸೆಲೆಬ್ರಿಟಿಗಳಿಗೆ ಈ ಗೌರವ ನೀಡಲಾಗುತ್ತದೆ. ಆದರೆ ಧೋನಿ ಗೌರವವೆಂದಷ್ಟೇ ಸ್ವೀಕರಿಸಲಿಲ್ಲ. ಒಬ್ಬ ಸಾಮಾನ್ಯ ಸೈನಿಕನಂತೆ ಪ್ಯಾರಾಚೂಟ್‌ ಟ್ರೈನಿಂಗ್‌ ಕೂಡ ಪಡೆದಿದ್ರು.

ಮೈದಾನದಲ್ಲೂ ದೇಶ ಪ್ರೇಮ ಮೆರೆದಿದ್ದ  ಮಹೇಂದ್ರ

ಪುಲ್ವಾಮಾ ದಾಳಿ ನಡೆದಾಗ ಆಸ್ಪ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸೇನೆಯ ಕ್ಯಾಪ್‌ ಧರಿಸಿದ ಹಿಂದೆ ಇದ್ದಿದ್ದು ಕೂಡಾ ಧೋನಿಯ ದೇಶಪ್ರೇಮ. ವಿಶ್ವಕಪ್‌ನಲ್ಲಿ ಬಲಿದಾನದ ಚಿಹ್ನೆಯ ಗ್ಲೌಸ್​ ಹಾಕಿಕೊಂಡು ದೇಶದ ಸೈನಿಕರಿಗೆ ಗೌರವ ನೀಡಿದ್ರು. ಇದೇ ಕಾರಣಕ್ಕಾಗಿಯೇ ಧೋನಿಯೊಳಗಿನ ಸೈನಿಕ ಮತ್ತೆ ಮತ್ತೆ ನೆನಪಾಗುತ್ತಾನೆ. ನಿಜವೆಂದರೆ, ಭಾರತೀಯರ ಪಾಲಿಗೆ ಕ್ರಿಕೆಟ್‌ ಆಟವಷ್ಟೇ ಅಲ್ಲ. ದೇಶಭಕ್ತಿಯ ದ್ಯೋತಕ. ಹೀಗಾಗಿಯೇ ಕ್ರಿಕೆಟ್​ ಅಭಿಮಾನಿಗಳಿಗೆ ಕ್ರಿಕೆಟಿಗರು ಯೋದರಂತೆ ಕಾಣ್ತಾರೆ.. ಇದೀಗ ಸೈನಿಕನಂತೆ ಕಣಿವೆಯಲ್ಲಿ ಗಸ್ತುಕಾಯುತ್ತಿದ್ದಾರೆ..

ಕಾವಲು  ಕಾಯುತ್ತಿದ್ದಾರೆ ಲೆಫ್ಟಿನೆಂಟ್ ಕರ್ನಲ್   ಧೋನಿ

ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ  . ವಿಕ್ಟರ್ ಫೋರ್ಸ್ ಭಾಗವಾಗಿ ಆಗಸ್ಟ್ 15ರವರೆಗೆ ಕಣಿವೆರಾಜ್ಯದಲ್ಲಿ ಗಸ್ತು ತಿರುಗುತ್ತಿದ್ದಾರೆ. ಈ ಮೂಲಕ ಭಾರತೀಯ ಸೇನೆಯ ಮೇಲಿರುವ ತಮ್ಮ ಅರ್ಪಣಾ ಮನೋಭಾವವನ್ನು ಧೋನಿ ಸಾಬೀತು ಪಡಿಸಿದ್ದಾರೆ. ಇನ್ನು ಸೇನೆಯಲ್ಲಿ ಧೋನಿಗೆ ಯಾವುದೇ ವಿಶೇಷ ಸೌಲಭ್ಯ ನೀಡೋದಿಲ್ಲ.. ಎಲ್ಲ ಸೈನಿಕರಿಗೆ ಯಾವರೀತಿಯಾಗಿ ಟ್ರೀಟ್​ ಮಾಡ್ತಾರೋ ಅದೇ ರೀತಿ ಧೋನಿಯನ್ನ ಟ್ರೀಟ್​ ಮಾಡ್ತಾರೆ ಅಂತ ಹೇಳಲಾಗ್ತಿದೆ… ಭಯೋತ್ಪಾದಕರ ಚಟುವಟಿಕೆಯ ಕೇಂದ್ರ ಬಿಂದುವಾಗಿರುವ ಅವಂತಿಪೋರಾದಲ್ಲಿ ಧೋನಿ ತರಬೇತಿ ಪಡೆಯುತ್ತಿರುವುದು ವಿಶೇಷ. ಇನ್ನು ಈ ಮೂಲಕ ದೇಶದ ನಾಗರಿಕರಿಗೆ ರಕ್ಷಣೆ ಒದಗಿಸಲು ಸೈನಿಕ ಧೋನಿ ಮುಂದಾಗಿದ್ದಾರೆ..

ಧೋನಿ ದೇಶ ಸೇವೆಗೆ ಸಲಾಮ್ ಹೊಡೆದ  ಗಂಭೀರ್

ಧೋನಿ ದೇಶ ಸೇವೆ ಕಂಡು  ಸ್ವತಃ  ತಂಡದ  ಮಾಜಿ  ಡ್ಯಾಶಿಂಗ್  ಓಪನರ್  ಗೌತಮ್ ಗಂಭೀರ್  ಸಲಾಮ್  ಹೊಡೆದಿದ್ದಾರೆ.  ಮಹೇಂದ್ರ ಸಿಂಗ್ ಧೋನಿ ಜತೆ ಅನೇಕ ವಿಚಾರಗಳಲ್ಲಿ ಗೌತಮ್ ಗಂಭೀರ್‌ಗೆ ಭಿನ್ನಭಿಪ್ರಾಯಗಳು ಇದ್ದಿರಬಹುದು. ಆದರೆ ದೇಶ ಸೇವೆಯ ವಿಚಾರಕ್ಕೆ ಬಂದಾಗ ಲೆಫ್ಟಿನಂಟ್ ಕರ್ನಲ್ ಆಗಿ ಕಾಶ್ಮೀರದಲ್ಲಿ ಕರ್ತವ್ಯ ಸಲ್ಲಿಸುವ ಧೋನಿ ನಿರ್ಧಾರವನ್ನು ಹಾಡಿ ಹೊಗಳಿದ್ದಾರೆ.

ಅದೇನೇ ಆಗಲಿ ತನ್ನ ಕನಸಿನ ಸೇವೆ ಮಾಡಬೇಕೆಂದು ಹಾತೊರೆದಿದ್ದ ಮಿಸ್ಟರ್​ ಕೂಲ್ ಇದೀಗ ದೇಶ ಕಾಯುವ ಮೂಲಕ ಜನರಿಗೆ ರಕ್ಷಣೆಗೆ ನಿಂತಿದ್ದಾರೆ.. ಈ ಮೂಲಕ ಇನ್ನಷ್ಟು ಯುವ ಜನರಿಗೆ ಸೇನೆಗೆ ಸೇರಲು ಸ್ಪೂರ್ತಿಯಾಗ್ತಿದ್ದಾರೆ. ಇಂಥಹ ಅಪ್ರತಿಮ ದೇಶಪ್ರೇಮಿಗೆ ಇಡೀ ದೇಶವೇ ಸೆಲ್ಯೂಟ್​ ಹೊಡೆಯುತ್ತಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ