ಶೆರಿನ್ ಮ್ಯಾಥ್ಯೂಸ್ ಪ್ರಕರಣ-ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಡಲ್ಲಾಸ್(ಅಮೆರಿಕ) ಜೂ.26-ಮೂರು ವರ್ಷ ಶೆರಿನ್ ಮ್ಯಾಥ್ಯೂಸ್ ಸಾವಿನ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕದ ಮಲ ತಂದೆ ವೆಸ್ಲಿ ಮ್ಯಾಥ್ಯೂಸ್‍ಗೆ ಇಲ್ಲಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ವೆಸ್ಲಿ ಮ್ಯಾಧ್ಯಾಸ್(39) ತನ್ನ ಮಲ ಮಗಳು ಶೆರಿನ್(3 ವರ್ಷ)ಳನ್ನು ಗಾಯಗೊಳಿಸಿ ಆಕೆಯ ಸಾವಿಗೆ ಕಾರಣನಾದ ಆಪಾದನೆ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಂಬೆರೆ ಗಿವೆನ್ಸ್ ಡೇವಿಡ್ ನೇತೃತ್ವದ ನ್ಯಾಯಾಧೀಶ ಸಮೂಹ ಜೀವಾವಧಿ ಶಿಕ್ಷೆ ತೀರ್ಪು ನೀಡಿತು.

ಕೇರಳ ಮೂಲದ ಶೆರಿನ್‍ಳನ್ನು ವೆಸ್ಲಿ ದತ್ತು ಪಡೆದಿದ್ದ. 2017ರಲ್ಲಿ ಮಗುವಿನ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣನಾಗಿದ್ದ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ