ಸಾರ್ವಜನಿಕರು ಸಂಚರಿಸುವ ಜಾಗದಲ್ಲಿರುವ ವೈನ್ಸ್ ಬಾರ್-ಕೂಡಲೇ ಸ್ಥಳಾಂತರಿಸುವಂತೆ ಸ್ಥಳೀಯರ ಒತ್ತಾಯ

ಬೆಂಗಳೂರು,ಜೂ.26- ಸಾರ್ವಜನಿಕರು ಸಂಚರಿಸುವ ಜಾಗದಲ್ಲಿ ತೆರೆದಿರುವ ಎಂ.ಆರ್.ಪಿ. ಜ್ಯೋತಿ ವೈನ್ಸ್ ಬಾರ್‍ನ್ನು ಕೂಡಲೇ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ನಲ್ಲೂರಹಳ್ಳಿಯಿಂದ ಸಿದ್ದಾಪುರಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸ್ಥಳೀಯರ ವಿರೋಧ ನಡುವೆಯೂ ಜ್ಯೋತಿ ವೈನ್ಸ್ ಬಾರ್ ತೆರೆದಿದ್ದು ರಸ್ತೆಯಲ್ಲಿ ಸಂಚರಿಸುವ ಮಹಿಳೆಯರು ಹಾಗು ಶಾಲಾ ಮಕ್ಕಳಿಗೆ ಕಿರಿ ಕಿರಿಯುಂಟಾಗಿದೆ.

ಅಕ್ಕಪಕ್ಕ ಜನರು ಮದ್ಯದಂಗಡಿ ಕುಳಿತು ಮದ್ಯ ಸೇವನೆಯಲ್ಲಿ ತೊಡಗುವುದಲ್ಲದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರಾದ ಕಿರಣ್‍ರೆಡ್ಡಿ ತಿಳಿಸಿದ್ದಾರೆ.

ರಾತ್ರಿ ವೇಳೆ ನಿಗದಿತ ಸಮಯ ಮೀರಿ ಬಾರ್ ತೆರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿಚಾರವಾಗಿ ಇಲ್ಲಿ ನಡೆಸುತ್ತಿರುವ ಘಟನೆಗಳ ಕುರಿತು 3 ಬಾರಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಹಾಗು ಡಿ.ಸಿ.ಪಿ ಅಬ್ದುಲ್ ಅಹದ್ ಬಾರ್ ಸ್ಥಳಾಂತರಿಸಲು ತಿಳಿಸಿರುತ್ತಾರೆ. ಆದರೆ ಯಾವುದೆ ಒತ್ತಡಕ್ಕೆ ಬಾರ್ ಮಾಲಿಕ ಮಣಿದಿಲ್ಲ ಎಂದು ಅವರು ದೂರಿದ್ದಾರೆ.

ಆಬಕಾರಿ ಇಲಾಖೆಯ ಅಧಿಕಾರಿಗಳಾದ ನಾರಾಯಣ ಮತ್ತು ತಂಡದಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಾರ್ ಸ್ಥಳಾಂತರಿಸಲು ಸೂಚನೆ ನೀಡಿದ್ದು, ಬಾರ್ ಮಾಲಿಕರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಇದೇ ಸಮಯದಲ್ಲಿ ಭಾರತೀಯ ಸೇವಾ ಸಮಿತಿ ರಾಜ್ಯಾದ್ಯಕ್ಷ ಹೆಚ್.ಎಂ.ರಾಮಚಂದ್ರ ಮಾತನಾಡಿ, ಸಾರ್ವಜನಿಕರಿಗೆ ಕಿರಿ ಕಿರಿಯಾಗುತ್ತಿರುವ ಜಾಗದಲ್ಲಿ ಮದ್ಯದಂಗಡಿ ಇಟ್ಟಿರುವುದು ತಪ್ಪು ಯಾವುದೇ ಕಾರಣಕ್ಕೂ ಇಲ್ಲಿ ಎಂಆರ್‍ಪಿ ಇಡಲು ಬಿಡುವುದಿಲ್ಲ ಎಂದು ತಿಳಿಸಿದರು.

ಕೂಡಲೇ ಎಂಆರ್‍ಪಿ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ