ನಾಳೆಯಿಂದ ಗೃಹ ಸಚಿವರ ಕಾಶ್ಮೀರ ಪ್ರವಾಸ

ನವದೆಹಲಿ,ಜೂ.25- ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿ ಅಮಿತ್ ಷಾ ನಾಳೆಯಿಂದ ಎರಡು ದಿನಗಳ ಕಾಲ ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಮೊದಲು ಅವರ ಕಾಶೀರ ಭೇಟಿಗೆ ಜೂ.30ಕ್ಕೆ ದಿನಾಂಕ ನಿಗದಿಯಾಗಿತ್ತು.

ಕೇಂದ್ರ ಬಜೆಟ್ ಮಂಡನೆ ಹಾಗೂ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಅಮಿತ್ ಷಾ ತೊಡಗಬೇಕಿರುವ ಹಿನ್ನೆಲೆಯಲ್ಲಿ ಅವರ ಕಾಶ್ಮೀರ ಭೇಟಿ ದಿನಾಂಕದಲ್ಲಿ ಬದಲಾವಣೆಯಾಗಿದೆ.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಅವರನ್ನು ನಿಗ್ರಹಿಸುವ ಸೇನಾಪಡೆಗಳ ಕಾರ್ಯಾಚರಣೆಯೂ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಗೃಹಸಚಿವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಶ್ರೀನಗರದಲ್ಲಿ ನಾಳೆ ಸಂಜೆ ಅಮಿತ್ ಷಾ ಉನ್ನತಮಟ್ಟದ ಭದ್ರತಾ ಸಮಿತಿಯಲ್ಲಿ ಪಾಲ್ಗೊಂಡು ಕಣಿವೆ ರಾಜ್ಯದ ಕಣಿವೆ ಪ್ರದೇಶದಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಹಿರಿಯ ಸೇನಾಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಾಲಿಕ್ ಅವರೊಂದಿಗೆ ಚರ್ಚೆ ನಡೆಸಲಿರುವ ಗೃಹಸಚಿವರು, ಕಾಶ್ಮೀರದ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

ಕಾಶ್ಮೀರ ಭೇಟಿ ವೇಳೆ ಕೆಲವು ಜಿಲ್ಲೆಗಳ ಪಂಚಾಯತ್ ಮತ್ತು ಬ್ಲಾಕ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಅವರು ಚರ್ಚಿಸಲಿದ್ದಾರೆ.

ಸಂತ ಶ್ರೀ ಅಮರನಾಥಜೀ ಮಂದಿರಕ್ಕೂ ಭೇಟಿ ನೀಡಲಿರುವ ಅಮಿತ್ ಷಾ, ಅಲ್ಲಿ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ