ಬೆಂಗಳೂರು, ಜೂ.23- ದೃಶ್ಯಮಾಧ್ಯಮ ಹಾಗೂ ಮೊಬೈಲ್ ಬಳಕೆಯಿಂದ ಜಾನಪದ ಕಲೆ ಮತ್ತು ನೃತ್ಯ ಕ್ಷೀಣಿಸುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.
ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶ್ರಿ ಸಿದ್ದಪ್ಪಾಜಿ ಮತ್ತು ಸಾಂಸ್ಕøತಿಕ ಕಲಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಂಸ್ಥೆಯ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆಯಿಂದ ಎಲ್ಲ ಕ್ಷೇತ್ರಗಳು ಬೆಳವಣಿಗೆ ಕಾಣುತ್ತಿವೆ. ಆದರೆ ಜಾನಪದ ಕ್ಷೇತ್ರ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾನಪದ ಸಂಸ್ಕøತಿಯನ್ನು ನಾವು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಅಂತಹ ಕೆಲಸವನ್ನ ಶ್ರೀ ಸಿದ್ದಪ್ಪಾಜಿ ಜಾನಪದ ಮತ್ತು ಸಾಂಸ್ಕøತಿಕ ಕಲಾ ಟ್ರಸ್ಟ್ ಮಾಡುತ್ತಿದೆ ಎಂದು ಅಭಿನಂದಿಸಿದರು.
ಇತ್ತೀಚಿನ ದಿನದಲ್ಲಿ ಹಣವನ್ನ ಕೊಟ್ಟು ಡಾಕ್ಟರೇಟ್ ಪದವಿ ಪಡೆಯುತ್ತಿದ್ದು ಈ ಪದವಿಗೆ ಗೌರವವಿಲ್ಲದಂತಾಗಿದೆ ಇದು ದುಷ್ಟಕಾರ ಸಂಗತಿಯಾಗಿದೆ. ಯಾರು ಆ ಪದವಿಗೆ ಅರ್ಹರು ಅವರಿಗೆ ನೀಡಿದ್ದಾರೆ ಮಾತ್ರ ಆ ಪದವಿಗೆ ಗೌರವ ಸಿಗಲಿದೆ ಎಂದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಸಾಪ ದ ಅಧ್ಯಕ್ಷ ಮಾಯಣ್ಣ, ನಿವೃತ್ತಿ ಆರಕ್ಷಕ ಡಾ.ವೇಮಗಲ್ ನಾರಾಯಣಸ್ವಾಮಿ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಧ್ಯಕ್ಷ ಎಂ ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.