ಕೊಲ್ಕತಾ, ಜೂ.20- ಭಾರತೀಯ ಸೇನೆಯ ತರಬೇತಿ ಕ್ಯಾಂಪ್‍ನಲ್ಲಿಯೇ ಸಿಬ್ಬಂದಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಕೊಲ್ಕತಾದಲ್ಲಿ ನಡೆದಿದೆ.
ಕೋಲ್ಕತಾದಲ್ಲಿರುವ ಭಾರತೀಯ ಸೇನೆಯ ಪೂರ್ವ ಕಮಾಂಡ್ ಕೇಂದ್ರ ಕಚೇರಿ ಇರುವ ಪೋರ್ಟ್ ವಿಲಿಯಂ ಒಳಗೆ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದ್ದು, ಈ ಕುರಿತು ಸೇನೆಯ ಗ್ರೂಪ್ ಡಿ ಸಿಬ್ಬಂದಿಯಾಗಿದ್ದ ಆರೋಪಿ ಸಾಗರ್ ಮಲ್ಲಿಕ್ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಪೋರ್ಟ್ ವಿಲಿಯಂನಲ್ಲಿ ಓಲ್ಡ್ ಬಾಪು ಲೇನ್‍ನಲ್ಲಿದ್ದ ಮನೆಯಲ್ಲಿ ಶನಿವಾರ ಸಂಜೆ ಮತ್ತೋರ್ವ ಸೇನಾ ಸಿಬ್ಬಂದಿಯ ಪುತ್ರಿಯು ಮನೆಯಲ್ಲಿ ಒಬ್ಬಳೇ ಇರುವ ವೇಳೆ ಆರೋಪಿಯು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿ ಸಾಗರ್ ಮಲ್ಲಿಕ್ ಪೋರ್ಟ್ ವಿಲಿಯಂಗೆ ಕೆಲ ದಿನಗಳ ಹಿಂದೆ ತನ್ನ ಸಹೋದರಿಯ ನೋಡಲು ಆಗಮಿಸಿದ್ದ. ಈ ವೇಳೆ ಆತ ಬಾಲಕಿಯನ್ನು ಗಮನಿಸಿದ್ದ. ಮನೆಯಲ್ಲಿ ಪೋಷಕರು ಇಲ್ಲದ ಸಮಯ ನೋಡಿಕೊಂಡು ಆತ ಕೃತ್ಯವೆಸಗಿದ್ದಾನೆ.
ಶಿಸ್ತಿಗೆ ಹೆಸರಾದ ಭಾರತೀಯ ಸೇನೆಯಲ್ಲಿ ಇಂತಹ ಘಟನೆಗಳಿಂದ ಕಳಂಕ ಬಂದಿದೆ.