ನೋಯ್ಡಾ, ಜೂ.20- ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಗಳಂತಹ ಪ್ರಕರಣಗಳಿಂದ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ನೀಚ ಘಟನೆ ನಡೆದಿದೆ.
ಮೂವರು ವೇಶ್ಯೆಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ಘಟನೆ ನಡೆದಿದೆ.
ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಓಲಾ ಕ್ಯಾಬ್‍ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಮಹಿಳೆಯರನ್ನು ಸಂಪರ್ಕಿಸಿದ್ದಾರೆ.
ದುಷ್ಕರ್ಮಿಗಳು ಮಹಿಳೆಯರನ್ನು ನೋಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ. ಮುಂಗಡ ಹಣವನ್ನೂ ನೀಡಿದ್ದಾರೆ.
ನೋಯ್ಡಾ ಸೆಕ್ಟರ್ 135 ಸಮೀಪದ ಫಾರ್ಮ್ ಹೌಸ್‍ಗೆ ಕರೆದೊಯ್ದ ದುಷ್ಕರ್ಮಿಗಳು ಅಲ್ಲಿ ಮತ್ತೆ ಏಳು ಮಂದಿಯೊಂದಿಗೆ ಸೇರಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ.
ಅಲ್ಲದೆ ಮಹಿಳೆಯರನ್ನು ಥಳಿಸಿ ಅವರ ಬಳಿ ಇದ್ದ ಹಣವನ್ನೂ ಕಸಿದುಕೊಂಡಿದ್ದಾರೆ. ಈ ಸಂಬಂಧ ಮಹಿಳೆಯರು ನೋಯ್ಡಾ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ ಫಾರ್ಮ್ ಹೌಸ್‍ಗೆ ಬೀಗ ಜಡಿದಿದ್ದು, 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.