ಹತ್ತು ಹಂತಸ್ತುಗಳ ಕಟ್ಟಡವೊಂದ್ರರಲ್ಲಿ ಆಕಸ್ಮಿಕ ಬೆಂಕಿ

ನವದೆಹಲಿ, ಜೂ.20- ರಾಜಧಾನಿ ದೆಹಲಿಯ ಹತ್ತು ಅಂತಸ್ತುಗಳ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ 100ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ವಾಯುವ್ಯ ದೆಹಲಿಯ ಪಿತಾಂಪುರದ 10 ಮಹಡಿಗಳ ಕಟ್ಟಡವೊಂದರ ಐದನೆ ಮಹಡಿಯಲ್ಲಿ ಸುಮಾರು ನಸುಕಿನಲ್ಲಿ ಬೆಂಕಿ ಆಕಸ್ಮಿಕದ ಸುದ್ದಿ ತಿಳಿದು 15 ವಾಹನಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮೂರು ಗಂಟೆಗಳ ನಿರಂತರ ಹೋರಾಟದ ನಂತರ ಅಗ್ನಿಯ ಜ್ವಾಲೆಗಳನ್ನು ತಣಿಸಲಾಯಿತು.

ಈ ಘಟನೆಯಲ್ಲಿ ಕೆಲವು ನಿವಾಸಿಗಳಿಗೆ ಸ್ವಲ್ಪ ಉಸಿರುಗಟ್ಟಿದಂತಾಯಿತು. ಆದರೆ ಅವರಿಗೆ ಚಿಕಿತ್ಸೆ ಅಗತ್ಯವಿಲ್ಲ ಎಂದು ಮುಖ್ಯ ಅಗ್ನಿ ಶಾಮಕ ಅಧಿಕಾರಿ ಅತುಲ್ ಗರ್ಗ್ ಹೇಳಿದ್ದಾರೆ.

ಬೆಂಕಿ ಆಕಸ್ಮಿಕದಲ್ಲಿ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ಗೃಹ ಬಳಕೆ ವಸ್ತುಗಳು ಭಸ್ಮವಾಗಿವೆ.

ಈ ಘಟನೆಗೆ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ