ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ವಿಶ್ವಕಪ್ನಿಂದಲೇ ಹೊರ ನಡೆದಿದ್ದಾರೆ. ಇಂಜುರಿ ಸಮಸ್ಯೆಯಿಂದ ಬಳಲಿದ್ದ ಧವನ್ ಕೆಲವೇ ವಾರಗಳಲ್ಲಿ ಚೇತರಿಸಿಕೊಂಡು ಮತ್ತೆ ಕಮ್ ಬ್ಯಾಕ್ ಮಾಡ್ತಾರೆ ಟೀಂ ಇಂಡಿಯಾ ಅಬಿಮಾನಿಗಳ ಆಸೆ ನುಚ್ಚುನೂರಾಗಿದೆ.
ಧವನ್ ಔಟ್ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ
ಡ್ಯಾಶಿಂಗ್ ಓಪನರ್ ಶಿಖರ್ ಧವನ್ ವಿಶ್ವ ಕ್ರಿಕೆಟ್ನ ಬೆಸ್ಟ್ ಓಪನರ್ಗಳಪೈಕಿ ಒಬ್ರು. ಕಳೆದ ಹಲವಾರು ವರ್ಷಗಳಿಂದ ಟೀಂ ಇಂಡಿಯಾ ಪರ ಅದೆಷ್ಟೋ ಪಂದ್ಯಗಳಲ್ಲಿ ಒಳ್ಳೆಯ ಓಪನಿಂಗ್ ಕೊಟ್ಟು ವಿಶ್ವ ಕ್ರಿಕೆಟ್ನಲ್ಲಿ ಗುರುತಿಸಿಕೊಂಡಿದ್ದಾರೆ. ಇಂಥ ಧವನ್ ವಿಶ್ವಕಪ್ಗೂ ಮುನ್ನ ಫಾರ್ಮ್ ಸಮಸ್ಯೆಯಿಂದ ಬಳಲಿದ್ರು. ಇಷ್ಟಾದ್ರು ಆಯ್ಕೆ ಸಮಿತಿ ಧವನ್ ಮೇಲೆ ನಂಬಿಕೆ ಇಟ್ಟು ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು.
ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಗಾಯಗೊಂಡ ಧವನ್
ಮೊದಲ ಪಂದ್ಯದಲ್ಲಿ ಫ್ಲಾಪ್ ಆಗಿದ್ದ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧಧ ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಲೇಬೇಕೆಂದು ಕಣಕ್ಕಿಳಿದಿದ್ರು.
ಆದರೆ ಧವನ್ ವೇಗಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ರು. ಧವನ್ ತಕ್ಷಣವೇ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರೆಸಿದ್ರು.
ನೋವಿನಲ್ಲೂ ಶತಕ ಬಾರಿಸಿ ಅಬ್ಬರಿಸಿದ್ದ ಡ್ಯಾಶಿಂಗ್ ಓಪನರ್
ಅಂದು ವೇಗಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಹೆಬ್ಬೆರೆಳಿಗೆ ಗಾಯಮಾಡಿಕೊಂಡ ಧವನ್ ನೋವಿನಿಂದ ನರಳಾಡಿದ್ರು. ಆದರೂ ಬ್ಯಾಟಿಂಗ್ ಮುಂದುವರೆಸಬೇಕೆಂದು ನಿಶ್ಚಯಿಸಿದ ಈ ಡೆಲ್ಲಿ ಬ್ಯಾಟ್ಸ್ಮನ್ ಶತಕ ಬಾರಿಸಿ ಮಿಂಚಿದ್ರು. ನೋವಿನಲ್ಲೂ ಧವನ್ ಶತಕ ಬಾರಿಸಿ ಪರಾಕ್ರಮ ಮೆರೆದ್ರು.ಇಂಜುರಿಯಿಂದ ನರಳಾಡಿದ ಧವನ್ ನಂತರಫೀಲ್ಡಿಂಗ್ ಮಾಡಲು ಬರಲಿಲ್ಲ..
21ದಿನಗಳ ಕಾಲ ಡೆಲ್ಲಿ ಬ್ಯಾಟ್ಸ್ಮನ್ ಧವನ್ ರೆಸ್ಟ್
ಇಂಜುರಿಯಿಂದ ಬಳಲಿದ ಧವನ್ ತಂಡದ ಪ್ಲೇಯಿಂಗ್ ಇಲೆವೆನ್ನಿಂದ ಹೊರ ನಡೆದ್ರು. ತಂಡದ ಮ್ಯಾನೇಜ್ಮೆಂಟ್ ಧವನ್ಗೆ 21 ದಿನಗಳ ಕಾಲ ವಿಶ್ರಾಂತಿಯನ್ನ ನೀಡಲಾಯಿತು. ಧವನ್ ಬೇಗ ಚೇತರಿಸಿಕೊಂಡು ಮತ್ತೆ ತಂಡಕ್ಕೆ ಕಮ್ಬ್ಯಾಕ್ ಮಾಡುವುದ್ಕಕಾಗಿ ಫಿಸಿಯೋ ಜೊತೆಗೂಡಿ ಹೆಬ್ಬೆರಳಿಗೆ ಚಿಕಿತ್ಸೆ ಪಡೆದಯಲು ಲೀಡ್ಸ್ಗೆ ತೆರೆಳಿದ್ದರು.
ಇಂಜುರಿಯಲ್ಲೂ ಪ್ರಾಕ್ಟೀಸ್ ಮಾಡುತ್ತಿದ್ದ ಧವನ್
ಧವನ್ಗೆ ವಿಶ್ವಕಪ್ನಲ್ಲಿ ಆಡಬೇಕೆನ್ನುವ ಕ್ರೇಜ್ ಎಷ್ಟಿತ್ತಂದರೆ ಗಾಯಗೊಂಡ ಸಂದರ್ಭದಲ್ಲೂ ತಂಡದ ಆಟಗಾರರ ಜೊತೆ ಆನ್ಫೀಲ್ಡ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ರು. ಇದರ ಜೊತೆಗೆ ಜಿಮ್ನಲ್ಲೂ ವರ್ಕೌಟ್ ಮಾಡಿ ಎಲ್ಲರನ್ನು ನಿಬ್ಬೆರಗಿನಿಂದ ನೋಡುವಂತೆ ಮಾಡಿದ್ರು. ಇಂಜುರಿಯಿಂದ ಹೊರ ಬಂದು ತಂಡವನ್ನ ಬೇಗ ಸೇರಿಕೊಳ್ಳುತ್ತೇನೆ ಅಂತಾ ಕಾನ್ಫಿಡೆನ್ಸ್ನಲ್ಲಿ ಇದ್ರು.
ಕೊನೆಗೂ ಧವನ್ ವಿಶ್ವಕಪ್ ಟೂರ್ನಿಯಿಂದ ಔಟ್
ಇಂಜುರಿಗೆ ಗುರಿಯಾಗಿ ಮತ್ತೆ ಕಮ್ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದ ಧವನ್ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. 21 ದಿನಗಳಲ್ಲಿ ಗಾಯದಿಂದ ಚೇತರಿಸಿಕೊಳ್ಳಲು ತಂಡದ ಮ್ಯಾನೇಜ್ಮೆಂಟ್ ಗಡವು ನೀಡಿತ್ತು. ಆದರೆ ಧವನ್ ಗಾಯ ಚಿಕಿತ್ಸೆಗೆ ಸ್ಪಂದಿಸದೇ ಇರೋದ್ರಿಂದ ಈ ಡೆಲ್ಲಿ ಬ್ಯಾಟ್ಸ್ಮನ್ ಟೂನಿ್ಯಿಂದಲೇ ಹೊರ ಬಿದ್ದಿದ್ದಾರೆ.
ಧವನ್ ಬದಲು ರಿಷಭ್ ಪಂತ್ಗೆ ಚಾನ್ಸ್
ಗಾಯಗೊಂಡು ವಿಶ್ವಕಪ್ನಿಂದ ಹೊರಬಿದ್ದಿರುವ ಶಿಖರ್ ಧವನ್ ಬದಲು ಮರಿ ಧೋನಿ ಖ್ಯಾತಿಯ ರಿಷಭ್ ಪಂತ್ಗೆ ಅವಕಾಶ ನೀಡಲಾಗಿದೆ. ಸದ್ಯ ಟೀಂ ಇಂಡಿಯಾದಲ್ಲಿ ಎಲ್ಲ ಆಟಗಾರರು ಫಾರ್ಮ್ನಲ್ಲಿದ್ದಾರೆ. ಹೀಗಾಗಿ ರಿಷಭ್ ಪಂತ್ Sಣಚಿಟಿಜ bಥಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಶಿಖರ್ ಧವನ್ ವಿಶ್ವಕಪ್ನಿಂದ ಹೊರ ಬಿದ್ದಿದ್ದು ಟೀಂ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕ್ಯಾಪ್ಟನ್ ಕೊಹ್ಲಿ ಈ ಸವಾಲನ್ನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.