ರೋಷನ್‍ಬೇಗ್ ಅಮಾನತು ವಿರೋಧಿಸಿ ಬೆಂಬಲಿಗರ ಪ್ರತಿಭಟನೆ

ಬೆಂಗಳೂರು, ಜೂ.19-ಶಾಸಕ ರೋಷನ್‍ಬೇಗ್ ಅವರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಬೆಂಬಲಿಗರು ನಗರದಲ್ಲಿಂದು ಪ್ರತಿಭಟನೆ ನಡೆಸಿದ್ದಾರೆ.

ಇಂದು ಬೆಳಗ್ಗೆ ರೋಷನ್‍ಬೇಗ್ ಮನೆ ಮುಂದೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಅಮಾನತು ಕ್ರಮವನ್ನು ವಿರೋಧಿಸಿ ಧಿಕ್ಕಾರ ಕೂಗಿದ್ದಲ್ಲದೆ, ರೋಷನ್ ಬೇಗ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ರೋಷನ್‍ಬೇಗ್ ಒಳಗೆ ಪತ್ರಿಕಾಗೋಷ್ಠಿ ನಡೆಸುವ ವೇಳೆ ಹೊರಗೆ ಜಮಾಯಿಸಿದ್ದ ಮುಖಂಡರು, ಕಾಂಗ್ರೆಸ್‍ನ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ರೋಷನ್‍ಬೇಗ್ ಮನೆ ಮುಂದೆ ವಿಕೆಒ ಶಾಲೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡ ಪ್ರತಿಭಟನೆ ನಡೆಸಿದ್ದು, ವಿಶೇಷ.

ವಿಕೆಒ ಶಾಲೆಯನ್ನು ಐಎಂಎ ಜ್ಯುವೆಲ್ಸ್ ದತ್ತು ಪಡೆದು ನಡೆಸುತ್ತಿತ್ತು. ಸುಮಾರು 71 ಮಂದಿ ಶಿಕ್ಷಕರು ಐಎಂಎ ಶಿಕ್ಷಕರನ್ನು ಐಎಂಎ ಸಂಸ್ಥೆ ನೇಮಕಾತಿ ಮಾಡಿತ್ತು.

ಐಎಂಎ ಹಗರಣ ಬಯಲಾಗಿ ಸಂಸ್ಥೆ ಮುಚ್ಚಿದ ನಂತರ ಶಿಕ್ಷಕರಿಗೆ ವೇತನ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದ್ದು, ಶಾಲೆಯಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಸಕ ರೋಷನ್‍ಬೇಗ್ ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ