ನವದೆಹಲಿ, ಮಾ.26-ನಮ್ಮ ದೇಶದ ರಸ್ತೆಗಳು ಮೃತ್ಯಕೂಪಗಳಾಗಿ ಪರಿಣಮಿಸುತ್ತಿವೆ. ರಾಷ್ಟ್ರದ ಒಟ್ಟು ಉದ್ದದಲ್ಲಿ ರಾಷ್ಟ್ರೀಯ ಹೆದ್ದಾರಿಗಳು(ಎನ್ಎಚ್ಗಳು) ಇರುವುದು ಕೇವಲ ಶೇಕಡ 2ರಷ್ಟು. ಆದರೆ, ರಸ್ತೆ ಅಪಘಾತಗಳಲ್ಲೇ 35ರಷ್ಟು ಸಾವುಗಳು ಎನ್ಎಚ್ನಲ್ಲಿ ಸಂಭವಿಸುತ್ತಿರುವುದು ದುರಂತ. ದೇಶದಲ್ಲಿ ರಾಜ್ಯ ಹೆದ್ದಾರಿಗಳು ಶೇ.3ರಷ್ಟು ಮಾತ್ರ ಇದ್ದರೆ, ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಶೇ.28ರಷ್ಟು. 2016ರಲ್ಲಿ ದೇಶದಲ್ಲಿ ಒಟ್ಟು 1.5 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದರೆ, ಇದರಲ್ಲಿ 94,000 ಮಂದಿಯನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಬಲಿ ಪಡೆದಿವೆ. ಭಾರತದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ ಮೂರು ಅಪಘಾತಗಳಲ್ಲಿ ಒಂದು ಸಾವು ಸಂಭವಿಸುತ್ತಿವೆ ಎಂದು ರಸ್ತೆ ಸುರಕ್ಷತೆ ಪರಿಣಿತರು ಅಂಕಿ-ಅಂಶ ನೀಡಿದ್ದಾರೆ. ಅತಿ ವೇಗ, ಪಾನಮತ್ತರಾಗಿ ವಾಹನ ಚಾಲನೆ ಮಾಡುವಿಕೆ ಇತ್ಯಾದಿಯಂಥ ಸಂಚಾರ ನಿಯಮಗಳ ಉಲ್ಲಂಘನೆಗಳೆ ಈ ದುರಂತಗಳು ಮತ್ತು ಸಾವು-ನೋವುಗಳಿಗೆ ಕಾರಣ ಎಂದು ತಿಳಿಸಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳು ಮತ್ತು ತತ್ಸಂಬಂಧ ಸಾವು-ನೋವುಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಸ್ಥಳೀಯ ಪೆÇಲೀಸರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಇಂಥ ಹೈಸ್ಪೀಡ್ ಕಾರಿಡಾರ್ಗಳಲ್ಲಿ ಸಮರ್ಪಕ ಕಣ್ಗಾವಲು ಮತ್ತು ಪಹರೆ ಪಡೆಗಳನ್ನು ನಿಯೋಜಿಸಬೇಕು ಎಂದು ತಜ್ಞರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.