ಮಾಲೆ,ಜೂ.08-ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ಮಾಲ್ಟ್ವೀವಸ್‍ಗೆ ಆಗಮಿಸಿದರು. ಮಾಲ್ಡ್ವೀಸ್ ರಾಜಧಾನಿ ಮಾಲೆಯ ವೆಲೇನಾ ಅಂತರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತ ಕೋರಿದರು. ಪ್ರಧಾನಿ ಮೋದಿಯವರನ್ನು ಮಾಲೆಯ ಐತಿಹಾಸಿಕ ರಿಪಬ್ಲಿಕ್ ಚೌಕದಲ್ಲಿ 21 ಸುತ್ತು ಗುಂಡು ಸಿಡಿಸುವ ಮೂಲಕ ಪ್ರಧಾನಿಯವರಿಗೆ ಗೌರವ ಸಲ್ಲಿಸಲಾಯಿತು. ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಅವರ ಮೊದಲ ವಿದೇಶಿ ಪ್ರವಾಸವಾಗಿದೆ.
ಈ ಹಿಂದೆ ಪ್ರಧಾನಿ ಮೋದಿಯವರು ನವಂಬರ್‍ನಲ್ಲಿ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಲಿಲ್‍ರ ಪ್ರಮಾಣವಚನ ಸಂದರ್ಭದಲ್ಲಿ ಭೇಟಿ ನೀಡಿದ್ದರಾದರೂ, ಅದು ಸಂಪೂರ್ಣ ದ್ವಿಪಕ್ಷೀಯ ಭೇಟಿಯಾಗಿರಲಿಲ್ಲ. ತಮ್ಮ ಮೊದಲ ಅಧಿಕಾರವಧಿಯಲ್ಲಿ ಭೂತಾನ್‍ನ್ನು ಆಯ್ಕೆ ಮಾಡಿದ್ದ ಮೋದಿ ಈ ಬಾರಿ ಮಾಲ್ಟ್ವೀವ್ಸ್‍ನ್ನು ಆಯ್ಕೆ ಮಡಿರುವುದು ಸರ್ಕಾರದ “ನೆರೆ ರಾಷ್ಟ್ರಗಳಿಗೆ ಮೊದಲ ಆಧ್ಯತೆ” ನೀತಿಯ ಮುಂದುವರಿದ ಭಾಗವಾಗಿ ಕಾಣುತ್ತಿದೆ.
ನರೇಂದ್ರ ಮೋದಿಯವರಿಗೆ ಮಾಲ್ಡ್ವೀವ್ಸ್ ಸರ್ಕಾರ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ” ನಿಶಾನ್ ಇಜುದ್ಧೀನ್” ಘೋಷಣೆ ಮಾಡಿ ಗೌರವಿಸಿದೆ. ಇಂದು ಸಂಜೆ ನಡೆದ ಸಮಾರಂಭದಲ್ಲಿ ಮಾಲ್ಟ್ವೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಮಾಲ್ಡ್ವೀವ್ಸ್ ಹೇಳುವಂತೆ ಎರಡು ದೇಶಗಳ ನಡುವಿನ ಸುಧೀರ್ಘವಾದ ಮತ್ತು ಸೌಹಾರ್ದಯುತ ಸಂಬಂಧಗಳನ್ನು ಗಟ್ಟಿಗೊಳಿಸಲು ಹಾಗೂ ಪ್ರಧಾನಿ ಮೋದಿಯವರ ಹಲವಾರು ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತ ಮೋದಿಯವರ ಉಸ್ತುವಾರಿಯಲ್ಲಿ ಮಾಲ್ಡ್ವೀವ್ಸ್‍ಗೆ ನೀಡುತ್ತಿರುವ ಮಹತ್ವಪೂರ್ಣ ಸಹಾಯಕ್ಕಾಗಿ ಸಿಕ್ಕ ಗೌರವವಾಗಿದೆ. ಪ್ರತಿಷ್ಟಿತ ಪ್ರಶಸ್ತಿ ಸ್ವೀಕರಿಸಿದ ಏಕೈಕ ವಿದೇಶಿ ಗಣ್ಯರಾಗಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಯಾಗಿರುವ ಮಾಲ್ಡ್ವೀವ್ಸ್ ಅಧ್ಯಕ್ಷ ಸೋಲಿಯವರಿಗೆ ವಿಶ್ವಕಪ್‍ನಲ್ಲಿ ಪ್ರತಿನಿಧಿಸುವ ಭಾರತೀಯ ಕ್ರಿಕೆಟ್ ತಂಡ ಸಹಿ ಮಾಡಿರುವ ವಿಶೇಷ ಬ್ಯಾಟ್ ಒಂದನ್ನು ನೀಡಿ ಗೌರವಿಸಿದರು.
ಮಾಲ್ಡ್ವೀವ್ಸ್ ಸಂಸತ್ತಿನಲ್ಲಿ ಮೋದಿ ಭಾಷಣ:
ಸಂಜೆ ಮಾಲ್ಡ್ವೀವ್ಸ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವವನ್ನು ಸಮರ್ಥವಾಗಿ ಮುನ್ನೆಡಿಸಿದ ದೇಶ ಎಂಬ ಖ್ಯಾತಿಗೆ ಮಾಲ್ಡ್ವೀಸ್ ಪಾತ್ರವಾಗಿದೆ. ಈಗಾಗಿ ಇಲ್ಲಿ ಸಂತಸ ನೆಲಸಿದೆ, ಇಂಥ ದೇಶಕ್ಕೆ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಆಪ್ತ ಮಿತ್ರವಾಗಿದೆ.
ಇತಿಹಾಸಕ್ಕಿಂತಲೂ ಮಾಲ್ಡ್ವೀವ್ಸ್ ಸಂಬಂಧ ಪ್ರಾಚೀನವಾಗಿದೆ. 1988ರ ಘಟನೆಯಾಗಲಿ ಅಥವಾ 2004ರ ಸುನಾಮಿ ದುರಂತವಾಗಲಿ ಏನೇ ಸಂಭವಿಸಿದರೂ ಭಾರತದ ನೆರವಿದೆ. ಯಾವುದೇ ದುರಂತವಾದರೂ ಭಾರತೀಯ ನಾಗರೀಕತೆಯನ್ನು ಮತ್ತು ಸಂಸ್ಕøತಿಯನ್ನು ಮಾಲ್ಡ್ವೀವ್ಸ್ ಈಗಲೂ ಅಳವಡಿಸಿಕೊಂಡಿದೆ.
ವಿಶ್ವಕ್ಕೆ ಮಾರಕವಾಗಿರುವ ಭಯೋತ್ಪಾದನೆ ವಿಷಯದಲ್ಲಿ ಮಾಲ್ಡ್ವೀವ್ಸ್ ನೀಡುತ್ತಿರುವ ಸಹಕಾರ ತಮಗೆ ಸಂತಸ ನೀಡಿದೆ, ಅಲ್ಲದೇ ಸೌರಶಕ್ತಿ ಒಪ್ಪಂದ ಮತ್ತು ಶಾಶ್ವತ ಅಭಿವೃದ್ಧಿಗಳಲ್ಲಿ ತೋರಿದ ಆಸಕ್ತಿಯನ್ನು ಮೋದಿ ಶ್ಲಾಘಿಸಿದರು. ಅಲ್ಲದೇ ಮಾಲ್ಡ್ವೀವ್ಸ್ ಪುನರ್‍ಜ್ಜೀವನಗೊಳುಸುತ್ತಿರುವ ಹವಳ ನಿರ್ಮಿತ ವಿಶೇಷ ಶುಕ್ರವಾರ ಮಸೀದಿಗೆ ಭಾರತ ಕೊಡುಗೆ ನೀಡುವುದಾಗಿ ಘೋಷಿಸಿದರು.
ಒಪ್ಪಂದಗಳು:
ಹೈಡ್ರೋಗ್ರಪಿ, ಆರೋಗ್ಯ, ಸಾಗರಯಾನ, ತೆರಿಗೆ ಸೇವೆಗಳು, ಆಡಳಿತ ಸುಧಾರಣೆ, ನೌಕಾಬಲ ಸೇರಿದಂತೆ ಹಲವು ಅಭಿವೃದ್ಧಿ ಪೂರಕ ವಿಷಯಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದೇ ವೇಳೆ ಕರಾವಳಿ ರಕ್ಷಣೆಗೆ ರಡಾರ್ ವ್ಯವಸ್ಥೆಯನ್ನು ಉಭಯ ದೇಶಗಳ ನಾಯಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಫೆರಿ ಸೇವೆಗೆ ಒಪ್ಪಿಗೆ ನೀಡುವುದಾಗಿ ತಿಳಿಸಿದರು.