ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸುರೇಶ್ ಅಂಗಡಿ, ರಾಣಿ ಚೆನ್ನಮ್ಮ ರೈಲಿನ ಸಾಮಾನ್ಯ ದರ್ಜೆ ಬೋಗಿಯಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.
ಸೋಮವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರು ತಲುಪಿದರು. ಅತಿಗಣ್ಯರು ಪ್ರಯಾಣಿಸುವ ಕೋಚ್ಗಳು ಮಾತ್ರ ಸ್ವಚ್ಛವಾಗಿರುತ್ತವೆ. ಜನಸಾಮಾನ್ಯರು ಪ್ರಯಾಣಿಸುವ ಬೋಗಿಗಳು ಮತ್ತು ಶೌಚಗೃಹಗಳು ಸ್ವಚ್ಛವಾಗಿಲ್ಲ ಎಂದು ಸಚಿವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅಂಗಡಿ, ಎಲ್ಲ ರೈಲು ಪ್ರಯಾಣಿಕರನ್ನು ಇಲಾಖೆ ಸಮಾನವಾಗಿ ಕಾಣುತ್ತದೆ. ಸಾಮಾನ್ಯ ದರ್ಜೆ ಬೋಗಿಗಳಲ್ಲಿನ ಸಮಸ್ಯೆಗಳನ್ನು ಕೂಡಲೇ ಸಮರ್ಪಕವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.