ಬೆಂಗಳೂರು, ಜೂ.3-ಕರ್ನಾಟಕ ರಾಜ್ಯ ಮುಕ್ತ ವಿವಿ ಅವ್ಯವಹಾರ ಆರೋಪ ಕುರಿತಂತೆ ವಿವರಣೆ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ನೀಡಿದೆ.
ರಾಜ್ಯ ಮುಕ್ತ ವಿವಿ ನಿವೃತ್ತ ಕುಲಪತಿ ಕೆ.ಎಸ್.ರಂಗಪ್ಪ ಮತ್ತು ಇತರರ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ಬಗ್ಗೆ ಹೈಕೋರ್ಟ್ನ ವಿಭಾಗೀಯ ಪೀಠ ವಿಚಾರಣೆ ನಡೆಸಿ ವಿವರಣೆ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದೆ. ಜೂ.21ರೊಳಗೆ ಮಾಹಿತಿ ನೀಡಲು ಆದೇಶಿಸಿದೆ.
ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಉಪನ್ಯಾಸಕರ ಸಂಘದಿಂದ ಪಿಐಎಲ್ ಸಲ್ಲಿಸಲಾಗಿತ್ತು.ಈ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸಿ ನೋಟೀಸ್ ನೀಡಿದೆ.