ಮೇ.30ರಂದು ಪ್ರಧಾನಿಯಾಗಿ ಪ್ರತಿಜ್ನಾವಿಧಿ ಸ್ವೀಕರಿಸಲಿರುವ ಮೋದಿ

ನವದೆಹಲಿ: ಮೇ 30ರಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಮೇ 30ರಂದು ಸಂಜೆ 7 ಗಂಟೆಗೆ ಎರಡನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರತಿಜ್ನಾ ವಿಧಿ ಸ್ವೀಕರಿಸಲಿದ್ದಾರೆ. ರಾಷ್ತ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ನಾವಿಧಿ ಭೋಧಿಸಲಿದ್ದಾರೆ.

ನರೇಂದ್ರ ಮೋದಿ ಜತೆಗೆ ಅಂದು ಕೆಲ ಸಚಿವರುಗಳು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಲವು ವಿದೇಶಿ ಗಣ್ಯರು ಕುದ ಆಗಮಿಸಲಿದ್ದಾರೆ.

ಮೇ 30ರಂದು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ಗುಜರಾತ್ ನ ಗಾಂಧಿ ನಗರಕ್ಕೆ ತೆರಳಲಿದ್ದಾರೆ. ಅಲ್ಲಿ ತಾಯಿ ಹೀರಾ ಬೆನ್ ಅವರನ್ನು ಭೇಟಿಯಾಗಿ ಆಶಿರ್ವಾದ ಪಡೆಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ