ಬೆಂಗಳೂರು: ಎಸ್ ಎಂ ಕೃಷ್ಣ ಭೇಟಿ ಹಿಂದೆ ಯಾವುದೇ ಉದ್ದೇಶವಿಲ್ಲ. ಇದೊಂದು ಸೌಜನ್ಯಯುತವಾದ ಭೇಟಿ. ಈ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಎಸ್ ಎಂ ಕೃಷ್ಣ ಭೇಟಿ ಬಳಿಕ ಮಾತನಾಡಿದ ರಮೇಶ್, ನಾನು ಬಿಎಸ್ವೈರೊಂದಿಗೆ ಮಾತುಕತೆ ನಡೆಸಿಲ್ಲ. 1999 ರಲ್ಲಿ ಮೊದಲ ಬಾರಿಗೆ ನನ್ನನ್ನು ಶಾಸಕರಾಗಿ ಗೆಲ್ಲಿಸಿಕೊಂಡು ಬಂದಿದ್ದು ಕೃಷ್ಣ ಅವರು, ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಬಿಎಸ್ವೈ ಭೇಟಿ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಅವರು ಬಂದಿದ್ದು ಕಾಕತಾಳೀಯ ಅಷ್ಟೇ ಎಂದರು.
ಇನ್ನು ರಾಜೀನಾಮೆ ನೀಡುವ ಮಾತಿಗೆ ನಾನು ಬದ್ಧನಾಗಿದ್ದು, ಯಾವಾಗ ರಾಜೀನಾಮೆ ನೀಡುವೆ ಎಂಬುದಾಗಿ ಈಗ ಹೇಳುವುದಿಲ್ಲ. ನಾನು ನಮ್ಮ ತಂಡದ ಜತೆಗೆ ರಾಜೀನಾಮೆ ನೀಡುವೆ ಎಂದು ಪುನರುಚ್ಛರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಸುಧಾಕರ್ ಅವರು, ನನ್ನ ರಾಜಕೀಯ ಗುರು ಎಸ್ಎಂಕೆ ಅವರು ಅವರನ್ನು ನೋಡಿ ನಾನು ರಾಜಕೀಯಕ್ಕೆ ಬಂದೆ. ಅವರ ಆರೋಗ್ಯ ವಿಚಾರ ಮಾಡಲು ಪ್ರತಿ ತಿಂಗಳು ಭೇಟಿ ನೀಡುತ್ತೇನೆ ಎಂದರು.