ಬೆಂಗಳೂರು,ಮೇ 24- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ನಿರ್ಮಾಣಕ್ಕೂ ಮುನ್ನ ಯಲಹಂಕವು ಬೆಂಗಳೂರು ನಗರದ ಸಣ್ಣ ಉಪನಗರವಾಗಿತ್ತು. ವಿಮಾನ ನಿಲ್ದಾಣದಿಂದ ಕೇವಲ 20 ಕಿಮೀ ದೂರದಲ್ಲಿರುವ ಯಲಹಂಕ ನಗರ ಇಂದು ಪ್ರಾಮುಖ್ಯತೆ ಗಳಿಸುತ್ತಿದೆ.
ಕೆಂಗೆರಿ ಸ್ಯಾಟಲೈಟ್ ಟೌನ್ ನಂತೆಯೇ, ಯಲಹಂಕಾವು ಹೊಸ ಮತ್ತು ಹಳೆಯ ಪಟ್ಟಣದ ಲಕ್ಷಣಗಳನ್ನು ಒಳಗೊಂಡು ಉಪಗ್ರಹ ಪಟ್ಟಣವಾಗಿ ಬೆಳೆಯಬೇಕೆಂದು ನಾವು ಬಯಸಿದ್ದೆವು. ಆದರೆ ಇದು ಸಾಧ್ಯವಾಗಲಿಲ ಇಂದು ಯಲಹಂಕವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರದಡಿಯಲ್ಲಿದೆ ಎಂದು ವೈಷ್ಣವಿ ಗ್ರೂಪ್ ನ ನಿರ್ದೇಶಕ ಶ್ರೀ ದರ್ಶನ್ ಗೋವಿಂದರಾಜು ಹೇಳಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಈ ಪ್ರದೇಶದ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾದಾಗ, ಬೆಲೆಗಳು ಗಗನಕ್ಕೇರಿದವು.ಆದರೆ ಇಂದು ಹಲವಾರು ಬದಲಾವಣೆಯೊಂದಿಗೆ ಮಾರುಕಟ್ಟೆಯ ದರ ಕಾಯ್ದುಕೊಂಡಿದೆ ಎಂದರು. ವಿಮಾನ ನಿಲ್ದಾಣದ ಎಕ್ಸ್ ಪ್ರೆಸ್ ವೇ ಯಿಂದಾಗಿ ಬೆಂಗಳೂರು ಕೇಂದ್ರವನ್ನು ಮತ್ತಷ್ಟು ಸಮೀಪಕ್ಕೆ ತಂದಿದೆ ಎಂದಿದ್ದಾರೆ.
ಕೆಐಎಎಲ್ ವಿಮಾನ ನಿಲ್ದಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಈ ಪಟ್ಟಣವಿದೆ. ಯಲಹಂಕಾ ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎಕ್ಸ್ ಪ್ರೆಸ್ ವೇ ಹೆದ್ದಾರಿಯಿಂದಾಗಿ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಿದೆ.
ದೇವನಹಳ್ಳಿಯಲ್ಲಿನ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ (ಏರೋಸ್ಪೇಸ್ ಸೆಝ್) ನಿಂದಾಗಿ ವಾಣಿಜ್ಯ ಸ್ಥಳಾವಕಾಶದ ಅಭಿವೃದ್ಧಿ. ಇತ್ತೀಚೆಗೆ, ಮೆಗಾಲೆನ್ ಏರೋಸ್ಪೇಸ್ ಉತ್ಪಾದನಾ ಘಟಕವನ್ನು ನಿರ್ಮಿಸಲು ಡಾಲರ್ 143 ಕೋಟಿ ಹೂಡಿಕೆ ಮಾಡಿದೆ.
ಆ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಯೆಲಹಂಕವು ದೊಡ್ಡ ಹೂಡಿಕೆಗೆ ಅವಕಾಶ ನೀಡಲಿದೆ.ಸ್ವಲ್ಪವೇ ದೂರದಲ್ಲಿ ಉತ್ತಮ ಸೌಕರ್ಯಗಳು ದೊರೆಯುವಂತೆ ಮಾಡುವುದು ಅತಿ ಸೂಕ್ತ ಕ್ರಮವಾಗಿದೆ. ಸಹಜವಾಗಿ, ಆ ಪ್ರದೇಶದಲ್ಲಿನ ಆಸ್ತಿ ಇನ್ನೂ ಕೈಗೆಟುಕುವ ದರದ ವ್ಯಾಪ್ತಿಯಲ್ಲಿದೆ ಎಂಬುದು ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ.
ಇಲ್ಲಿ ಒಂದು ಮನೆಗೆ ಹೂಡಿಕೆ ಮಾಡುವ ವ್ಯಕ್ತಿಯು ಮುಂದಿನ 2 ರಿಂದ 3 ವರ್ಷಗಳಲ್ಲಿ ಉತ್ತಮ ಲಾಭ ಪಡೆಯುತ್ತಾನೆ ಎಂದು ಅವರು ತಿಳಿಸಿದ್ದಾರೆ.