ಬಿಷ್ಕೆಕ್, ಮೇ 22-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಕಿರ್ಜಿಸ್ತಾನ್ ಅಧ್ಯಕ್ಷ ಸೂರೋನ್ಬೇ ಜೀನ್ಬೆಕೋವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ವರ್ಧನೆ ಕುರಿತು ಸಮಾಲೋಚನೆ ನಡೆಸಿದರು.
ಶಾಂಘೈ ಸಹಕಾರ ಸಂಘಟನೆ(ಎಸ್ಸಿಓ)ಯ ವಿದೇಶಾಂಗ ಸಚಿವರ ಮಂಡಳಿಯ ಎರಡು ದಿನಗಳ ಸಭೆಯಲ್ಲಿ ಭಾಗವಹಿಸಲು ನಿನ್ನೆ ಕಿರ್ಜಿಸ್ತಾನ ರಾಜಧಾನಿ ಬಿಷ್ಕೆಕ್ಗೆ ಸುಷ್ಮಾ ಆಗಮಿಸಿದರು.
ಕಿರ್ಜಿಸ್ತಾನ್ ಮಧ್ಯ ಏಷ್ಯಾದ ಬಹು ಮುಖ್ಯ ಪಾಲುದಾರ ರಾಷ್ಟ. ವಿದೇಶಾಂಗ ಸಚಿವರು ಇಂದು ರಾಷ್ಟ್ರಾಧ್ಯಕ್ಷ ಸೂರೋನ್ಬೇ ಜೀನ್ಬೆಕೋವ್ ಅವರನ್ನು ಭೇಟಿ ಮಾಡಿದರು. ಎಲ್ಲ ಕ್ಷೇತ್ರಗಳಲ್ಲೂ ಸಂಬಂಧ ಬಲವರ್ಧನೆ ಸಂಬಂಧ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.