ವಿಶ್ವಕಪ್ ಕ್ರಿಕೆಟ್ ಮಹಾ ಸಮರಕ್ಕೆ ಕೌಂಟ್ಡೌನ್ ಶರುವಾಗಿದೆ. ಈ ಬಾರಿಯ ವಿಶ್ವಕಪ್ ಆಂಗ್ಲರ ನಾಡಲ್ಲಿ ನಡೆಯುತ್ತಿರೋದ್ರಿಂದ ಬ್ಯಾಟ್ಸ್ಮನ್ಗಳ ಪಾಳಿಗೆ ಸ್ವರ್ಗವಾಗಿದೆ. ರನ್ ಹೊಳೆ ಹರಿಯುವ ಇಂಗ್ಲೆಂಡ್ ಪಿಚ್ಗಳಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರ ಜೋರಾಗಿರುತ್ತೆ. ಹಾಗಾದ್ರೆ ಬನ್ನಿ ವಿಶ್ವಕಪ್ಗೂ ಮುನ್ನ ಯಾವ ಯಾವ ತಂಡಗಳು ಎಷ್ಟು ಶತಕಗಳನ್ನ ಬಾರಿಸಿದೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ನ್ನ ನೋಡೋಣ.
ವಿಶ್ವ ಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರರೇ ಶತಕ ವೀರರು..!
ವಿಶ್ವಕಪ್ಗಾಗಿ ಬಿಸಿಸಿಐ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಆದ್ರೆ, ಇತರೆ ತಂಡಗಳಿಗೆ ಹೋಲಿಸಿದ್ರೆ ಟೀಮ್ ಇಂಡಿಯಾ ಆಟಗಾರರೇ ಹೆಚ್ಚು ಶತಕ ಸಿಡಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿರುವ 15 ಆಟಗಾರರ ಪೈಕಿ ಶತಕ ಸಿಡಿಸಿರೋದು ಕೇವಲ 6 ಮಂದಿ ಮಾತ್ರ. ಆದ್ರೆ, ವಿಶ್ವಕಪ್ ಟೀಮ್ನಲ್ಲಿರೋ ಆಟಗಾರರ ಒಟ್ಟು ಶತಕಗಳ ಸಂಖ್ಯೆ 92 ಆಗಿದೆ. ಇದ್ರಲ್ಲಿ ನಾಯಕ ವಿರಾಟ್ ಕೊಹ್ಲಿಯದ್ದೇ 41 ಶತಕಗಳು ದಾಖಲಾಗಿದೆ. ಇನ್ನೊಂದು ವಿಶೇಷ ಸಂಗತಿ ಎಂದರೆ ವಿಶ್ವಕಪ್ಗೆ ಆಯ್ಕೆಯಾಗಿರೋ ತಂಡಗಳಲ್ಲಿರುವ ಆಟಗಾರರ ಶತಕಗಳು ಭಾರತ ತಂಡದ ಸನಿಹಕ್ಕೂ ಸಹ ಸಳಿಯುವುದಿಲ್ಲ..
61 ಶತಕಗಳ ಬಾರಿಸಿದೆ 2ನೇ ಸ್ಥಾನದಲ್ಲಿದೆ ಸೌತ್ ಆಫ್ರಿಕಾ..!
ಇನ್ನೂ ಹೆಚ್ಚು ಶತಕ ದಾಖಲಿಸಿರೋ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಸ್ಥಾನ ಪಡೆದಿದೆ. ಬಲಿಷ್ಠ ಆಗಾರರ ದಂಡನ್ನೇ ಹೊಂದಿದ್ದರು ಸೌತ್ ಆಫ್ರಿಕಾ ಆಟಗಾರು ಶತಕ ಸಿಡಿಸೋದ್ರಲ್ಲಿ ಹಿಂದೆಬಿದ್ದಿದ್ದಾರೆ. 61 ಶತಕಗಳಲ್ಲಿ ಸೌತ್ ಆಫ್ರಿಕಾ ತಂಡದಲ್ಲಿರುವ ಆರಂಭಿಕ ಆಟಗಾರ ಆಶೀಂ ಆಮ್ಲಾ ಪಾಲು 27 ಶತಕಗಳು ಆಗಿವೆ.
12ನೇ ವಿಶ್ವಕಪ್ಗೆ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡದಲ್ಲಿನ ಆಟಗಾರರು ಸಿಡಿಸಿರುವ ಒಟ್ಟು ಶತಕಗಳ ಸಂಖ್ಯೆ 55 ಮಾತ್ರ. ಶತಕ ಸಿಡಿಸೋದ್ರಲ್ಲಿ ಇಂಗ್ಲೆಂಡ್ ಆಟಗಾರರು ಹಿಂದಿದ್ರು, ವಿಶ್ವಕಪ್ ಗೆಲ್ಲುವ ಪೇವ್ರೇಟ್ ತಂಡವಾಗಿದೆ. 2 ವರ್ಷಗಳಿಂದ ಆಂಗ್ಲರ ಪ್ರದರ್ಶನ ನೋಡಿದ್ರೆ ಗೊತ್ತಾಗುತ್ತೆ . ಕ್ರಿಕೆಟ್ ಗುರುಗಳ ಹವಾ ಎಷ್ಟರ ಮಟ್ಟಿಗಿದೆ ಎಂದು. ವಿಶ್ವಕಪ್ ಗೆಲ್ಲುವ ತಂಡಗಳಲ್ಲಿನ ಮತ್ತೊಂದು ಫೇವ್ರೇಟ್ ತಂಡ ಆಸ್ಟ್ರೇಲಿಯಾ, ಇನ್ನೂ ಹೆಚ್ಚು ಬಾರಿ ವಿಶ್ವಕಪ್ ಗೆದ್ದಿರೊ ತಂಡ ಆಸ್ಟ್ರೇಲಿಯಾ ತಂಡದಲ್ಲಿರುವ ಆಟಗಾರರು ಸಿಡಿಸಿರೋ ಶತಕಗಳ ಸಂಖ್ಯೆ 46 ಮಾತ್ರಆಗಿದೆ. ಪಾಕಿಸ್ತಾನ 44, ನ್ಯೂಜಿಲೆಂಡ್ 42, ವೆಸ್ಟ್ ವಿಂಡೀಸ್ ಆಟಗಾರರು ದಾಖಲಿಸಿರೋದು 40 ಶತಕಗಳು ಮಾತ್ರ..
ಸಿಂಹಳೀಯರನ್ನ ಹಿಂದಿಕ್ಕಿದ ಬಾಂಗ್ಲ ಹುಲಿಗಳು
ಕ್ರಿಕೆಟ್ ಶಿಶುಗಳಾಗಿದ್ದ ಬಾಂಗ್ಲಾ ಕಳೆದ ನಾಲ್ಕೈದು ವರ್ಷಗಳಿಂದ ಬೆಳೆದುಬಂದ ರೀತಿ ನಿಜಕ್ಕೂ ರೋಚಕ. ಇಂದು ಬಲಿಷ್ಠ ತಂಡಗಳಿಗೆ ಶಾಕ್ ಕೊಡುವ ಮಟ್ಟಿಗೆ ಬೆಳೆದು ನಿಂತಿದೆ. ಲಂಕಾ ಮಾಜಿ ನಾಯಕರುಗಳಾದ ಸಂಗಾಕ್ಕಾರ, ಜಯವರ್ದನೆ ವಿದಾಯದ ಬಳಿಕ ಶ್ರೀಲಂಕಾ ತಂಡ ಅದಃಪತನದತ್ತ ಸಾಗಿದೆ. 2 ಬಾರಿ ವಿಶ್ವಕಪ್ ಗೆದ್ದಿರುವ ಶ್ರೀಲಂಕಾ ತಂಡದ ಪರಿಸ್ಥಿತಿ ಬಾಂಗ್ಲಾದೇಶಕ್ಕಿಂತ ಹೀನಾಯವಾಗಿದೆ. ಸದ್ಯ ವಿಶ್ವಕಪ್ಗೆ ಆಯ್ಕೆಯಾಗಿರೋ ಬಾಂಗ್ಲಾದೇಶ ತಂಡದ ಆಟಗಾರರು ದಾಖಲಿಸಿರುವ ಶತಕಗಳ ಸಂಖ್ಯೆ 31 ಆಗಿದೆ. ಆದ್ರೆ, ಶ್ರೀಲಂಕಾ ಆಟಗಾರರು ದಾಖಲಿಸಿರುವ ಸಂಖ್ಯೆ 12 ಮಾತ್ರ. ಬಾಂಗ್ಲಾ ತಂಡದಲ್ಲಿನ ಆಟಗಾರರು ದಾಖಲಿಸಿರುವ ಶತಕಗಳ ಅರ್ಧದಷ್ಟು ಸಹ ಶ್ರೀಲಂಕಾ ಆಟಗಾರರು ದಾಖಲಿಸಿಲ್ಲ. ಇನ್ನೂ ಕ್ರಿಕೆಟ್ ಶಿಶು ಅಫ್ಘಾನಿಸ್ಥಾನ ತಂಡದಲ್ಲಿರು ಆಟಗಾರರು 9 ಶತಕ ಸಿಡಿಸದ್ರೂ ಸ್ವಲ್ಪ ಮೈಮರೆತರೆ ಬಲಿಷ್ಠ ತಂಡಗಳಿಗೂ ಶಾಕ್ ನೀಡಬಲ್ಲದು..
ಒಟ್ಟಾರೆ ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿರುವ ಇಂಗ್ಲೆಂಡ್ ಪಿಚ್ಗಳಲ್ಲಿ ಈ ಬಾರಿಯ ಯುದ್ದದ್ದಲ್ಲಿ ಯಾವ ತಂಡ ಅತಿ ಹೆಚ್ಚು ಶತಕ ಬಾರಿಸುತ್ತೆ ಅನ್ನೋದನ್ನ ಆಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.