ಬೆಂಗಳೂರು, ಮೇ 19-ಸ್ವಯಂ ಉದ್ಯೋಗ ಮಾಡುವುದರಿಂದ ಡಾಕ್ಟರ್, ಇಂಜಿನಿಯರಿಗಳಿಗಿಂತಲೂ ಹೆಚ್ಚಿನ ಸಂಪಾದನೆ ಮಾಡಬಹುದು ಹಾಗೂ ಉತ್ತಮ ಜೀವನ ಸಾಗಿಸಬಹುದು ಎಂದು ಎಸ್‍ಆರ್‍ಎಸ್ ಡೆವಲಪರ್ಸ್‍ನ ಆಂಜಿನಪ್ಪ ತಿಳಿಸಿದರು.
ನಗರದ ಮಹಾರಾಷ್ಟ್ರ ಮಂಡಲ್‍ನಲ್ಲಿಂದು ಹಿಂದುಳಿದ ಜಾತಿಗಳ ಯುವ ಜನ ವೇದಿಕೆ ಮತ್ತು ಅಹಿಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಉದ್ಯಮಶೀಲತಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಡಾಕ್ಟರ್, ಇಂಜಿನಿಯರ್‍ಗಳು ಆಗಿಲ್ಲವೆಂದ ಮಾತ್ರಕ್ಕೆ ಪ್ರಯೋಜನಕ್ಕೆ ಬಾರದ ವ್ಯಕ್ತಿಗಳೆಂದಲ್ಲ, ಶಿಕ್ಷಣದಿಂದ ನಾವು ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಬಸವರಾಜ್ ಮಾತನಾಡಿ, ಟೆಕ್ನಾಲಜಿ ಕುರಿತಾದ ಎಲ್ಲಾ ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡು ಹಿಂದುಳಿದವರು ಎಂಬ ಬಿರುದನ್ನು ಕಿತ್ತುಹಾಕಿ ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಟಿ. ಬಿ. ಬೆಳಗಾವಿ ಮಾತನಾಡಿ, ಕೇವಲ ಉದ್ಯೋಗದ ಕುರಿತು ತರಬೇತಿಗಳು ಮಾತ್ರವಲ್ಲ, ರಾಜಕೀಯಕ್ಕೆ ಸಂಬಂಧಪಟ್ಟ ತರಬೇತಿಗಳನ್ನೂ ಸಹ ನೀಡಬೇಕು. ರಾಜಕೀಯವಾಗಿ ಮುಂದುವರೆದರೆ ಮಾತ್ರ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜ ಸೇವಕರಾದ ಕೆ. ಎ. ರಾಮಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ. ಅಮರನಾಥ ಅವರಿಂದ ಸಾಫ್ಟ್ ಸ್ಕಿಲ್ಸ್ ಟ್ರೈನಿಂಗ್ ಅನ್ನು ವ್ಯವಸ್ಥೆ ಮಾಡಿದ್ದರು.
ನಿಶಾ ಅಸೋಸಿಯೇಟ್ಸ್‍ನ ಎಸ್.ದೇವರಾಜ್, ಅಹಿಲ್ಯಾಬಾಯಿ ಹೋಳ್ಕರ್‍ನ ಅಧ್ಯಕ್ಷರಾದ ಪದ್ಮಸೋಮಶೇಖರ್ ಹಾಗು ಸಂಘದ ನಾಗರತ್ನಮ್ಮ ಉಪಸ್ಥಿತರಿದ್ದರು.