ನವದೆಹಲಿ: ಲೋಕಸಭಾ ಚುನಾವಣಾ ಕೊನೆ ಹಂತದ ಮತದಾನ ನಾಳೆ ನಡೆಯಲಿದ್ದು, ಅದಕ್ಕೂ ಮುನ್ನ ಮೋದಿ ಟೆಂಪಲ್ ರನ್ ನಡೆಸಲಿದ್ದಾರೆ. ಇಂದು ಉತ್ತರಖಂಡದ ಕೇದರನಾಥಕ್ಕೆ ಭೇಟಿ ನೀಡಲಿರುವ ಮೋದಿ ಅಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ನಾಳೆ ಬದ್ರಿನಾಥ್ಕ್ಕೆ ಭೇಟಿ ನೀಡಲಿದ್ದಾರೆ.
ಮೋದಿ ಚುನಾವಣೆ ಎದುರಿಸುತ್ತಿರುವ ವಾರಣಾಸಿ ಕ್ಷೇತ್ರ ಸೇರಿದಂತೆ 59 ಕ್ಷೇತ್ರಗಳಲ್ಲಿ ನಾಳೆ ಕೊನೆಯ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ.
ಕೇದರನಾಥ್ನಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದ ಬಳಿಕ, ಆ ಪ್ರದೇಶದಲ್ಲಿ ನಡೆಯುತ್ತಿರುವ ಪುನರ್ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪ್ರಧಾನಿ ಭೇಟಿ ಅಧಿಕೃತವಾಗಿರುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಚುನಾವಣಾ ನೀತಿ ಆಯೋಗ ಜಾರಿಯಲ್ಲಿರುವದನ್ನು ಮರೆಯಬಾರದು ಎಂದು ಚುನಾವಣಾ ಆಯೋಗ ಪ್ರಧಾನಿ ಕಚೇರಿಗೆ ಸೂಚನೆ ನೀಡಿದೆ.
ಇಂದು ಕೇದರನಾಥ ಭೇಟಿ ಬಳಿಕ ಅಲ್ಲಿಯೇ ತಂಗಲಿರುವ ಪ್ರಧಾನಿ ಮೋದಿ, ನಾಳೆ ಮಧ್ಯಾಹ್ನ ದೆಹಲಿಯಿಂದ ಬದ್ರಿನಾಥ್ಗೆ ಪ್ರಯಾಣಿಸಲಿದ್ದಾರೆ. ಕಳೆದ ನವೆಂಬರ್ನಲ್ಲಿ ದೀಪಾವಳಿ ಸಮಯದಲ್ಲಿ ಕೂಡ ಮೋದಿ ಕೇದರ್ನಾಥ್ಗೆ ಭೇಟಿ ನೀಡಿದ್ದರು. 2017ರಲ್ಲಿ ಕೂಡ ಎರಡು ಬಾರಿ ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿದ್ದರು.