ಬೆಂಗಳೂರು, ಮೇ 15-ರಾಜ್ಯ ಸರ್ಕಾರದ ಸಚಿವಾಲಯ 16 ಮಂದಿ ಶಾಖಾಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ.
ಶಾಖಾಧಿಕಾರಿಗಳಾದ ಚಂದ್ರಕಲಾ.ಎಸ್.ಎನ್., ಸುಶೀಲ.ಕೆ ಅವರನ್ನು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ, ಗಾಯತ್ರಿ ಜಿ.ಎನ್. ಅವರನ್ನು ಕಾರ್ಮಿಕ ಇಲಾಖೆಗೆ, ಚಂದ್ರಕಾಂತ ಭಜಂತ್ರಿ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ, ಸುಮಾ ಬಿ.ಎಸ್. ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ, ಮಂಜುಳಾ ಜಿ. ಅವರನ್ನು ಕೃಷಿ ಇಲಾಖೆಗೆ, ಆಶಾಕುಮಾರ್ ಅವರನ್ನು ಸಿಬ್ಬಂದಿ ಮತ್ತು ಆಡಳಿತಾಸುಧಾರಣಾ ಇಲಾಖೆಗೆ, ಶ್ರೀಪತಿ ಟಿ.ಕೆ. ಅವರನ್ನು ಒಳಾಡಳಿತ ಇಲಾಖೆಗೆ , ಮಂಜುಳಾ.ಆರ್ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಐ.ಎಸ್.ರುದ್ರಯ್ಯ ಅವರನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ವರ್ಗಾಯಿಸಲಾಗಿದೆ.
ಡಿ.ಧನಂಜಯ ಅವರನ್ನು ಕಾನೂನು ಇಲಾಖೆಗೆ, ಜಿ.ಎಂ.ಜಬೀನ್ತಾಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ, ಶಿವಕುಮಾರ್ ಮತ್ತು ಎಂ.ಕುಮಾರಸ್ವಾಮಿ ಅವರನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ , ವೆಂಕಟಲಕ್ಷ್ಮಿ ವಿ ಮತ್ತು ಉಮಾಮಹೇಶ್ವರಿ ಬಿ.ಇ. ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.