ನಾವು 1 ದಿನದಲ್ಲಿ ಎಷ್ಟು ಭಾರಿ ಭೋಜನವನ್ನು ಮಾಡಬೇಕು?
ನಾವು 1 ದಿನದಲ್ಲಿ ಎಷ್ಟು ಭಾರಿ ಭೋಜನವನ್ನು ಮಾಡಬೇಕು ಇದು ನಮಗೆಲ್ಲರಿಗು ಕಾಡಿಸುವ ಪ್ರಶ್ನೆ. ಹಲವಾರು ಆದುನಿಕ ಮಾಹಿತಿ ಹಾಗು ಸಂಶೋದನೆಯ ಪ್ರಕಾರ ನಾವು ನಮ್ಮ 1 ದಿನದ ಒಟ್ಟು ಆಹಾರವನ್ನು 5-6 ಭಾರಿ ಸಣ್ಣ ಪ್ರಮಾಣದಲ್ಲಿ ವಿಭಜಿಸಿ ಸೇವೆಸಬೇಕೆ0ದು ! ಆದರೆ ಯಾವುದೆ ನಮ್ಮ ಹಿಂದು ಶಾಸ್ತ್ರಗಳಲಾಗಲ್ಲಿ ಆಯುರ್ವೇಧದಲ್ಲಾಗಲ್ಲಿ ಈ ಮಾತನ್ನು ಒಪ್ಪುವುದಿಲ್ಲ. ನಾವು ಎಷ್ಟೋ ಜನ ಹಿರಿಯರು ಕೇವಲ 1 ದಿನದಲ್ಲಿ 2 ಬಾರಿ ಮಾತ್ರ ಭೋಜನ ಮಾಡುವ ಪದ್ದತಿಯನ್ನು ರುಡಿಸಿಕೋಂಡು ಸ್ವಾಸ್ತ್ಯವಾಗಿರುವುದನ್ನು ನೋಡಿದ್ದೀವಿ ಹಾಗು ಕೇಳಿದ್ದೀವಿ .ಹಾಗಾದರೆ ಯಾವುದನ್ನು ನಾವು ಅನುಸರಿಸಬೇಕು? ಈ ಪ್ರಶ್ನೆಗೆ ನಮ್ಮ ಆಚಾರ್ಯರು ನಮ್ಮ ಯುಕ್ತಿ ಹಾಗು ನಮ್ಮ ಜಾಠರಾಗ್ನಿ ಬಲವನ್ನು ಮೋದಲು ನಾವು ಅರಿಯಬೇಕು ಎಂಬ ಉತ್ತರ ನೀಡಿದ್ದಾರೆ. ಸಾಮಾನ್ಯವಾಗಿ ನಾವು ಪಾಲಿಸಬೇಕಾದ ನಿಯಮವೆಂದರೇ, ಹೇಗೆ ನಾವು ಸೂರ್ಯನಿಗೆ ಅಗ್ನಿಹೋತರ್ಿಯನ್ನು 1 ದಿನದಲ್ಲಿ 2 ಬಾರಿಮಾಡುತ್ತೇವೋ ಹಾಗೆಯೇ ಭೋಜನವನ್ನು 1 ದಿನದಲ್ಲಿ 2 ಬಾರಿ ಮಾತ್ರ ಮಾಡಬೇಕೆಂದು.
ಭೋಜನ ಪಾತ್ರ
ಭೋಜನವನ್ನು ಸ್ವರ್ಣದಿಂದ ಮಾಡಿರುವ ಪಾತ್ರೆಯಲ್ಲಿ ಭಕ್ಷಿಸುವುದರಿಂದ ದರ್ಶನ ಶಕ್ತಿ ಹೇಚ್ಚುತ್ತದೆ,ಪಿತ್ತವನ್ನು ಕಡಿಮೆಮಾಡುತ್ತದೆ. ರಜತದಿಂದ ಮಾಡಿದ ಪಾತ್ರೆ ನಮ್ಮ ದೇಹದ ಉಷ್ಣತೆ ಕಡಿಮೆಮಾಡುತ್ತದೆ. ಕಂಚಿನಿಂದ ಮಾಡಿರುವ ಪಾತ್ರೆಯಿಂದ ಬುದ್ದಿವಿವರ್ದನೆಯಾಗುತ್ತದೆ ಹಾಗು ಊಟದ ರುಚಿ ಹೇಚ್ಚುತದೆ.ಇನ್ನು ಲೋಹದಿಂದ್ದ ಮಾಡಿದ ಪಾತ್ರೇ ಉಪಯೋಗಿಸುವುದರಿಂದ್ದ ರಕ್ತಹೀನತೆಯನ್ನು ತಡೆಯುತ್ತದೆ ಹಾಗು ಕಾಮಾಲೆಯಿಂದ ಪೀಡಿತರಾದವರಿಗೆ ತುಂಬ ಸಹಾಯಕಾರಿ.
ಜಲಪಾತ್ರೇ
ಜಲವನ್ನು ಸೇವಿಸುವ ಪಾತ್ರೆಯಲ್ಲಿ ತಾಮ್ರಪಾತ್ರೆ ಉತ್ತಮ. ಇದಿಲದಿದ್ದಲ್ಲಿ ಮಣ್ಣಿನ ಮಡಿಕೆ ಉಪಯೋಗಿಸಬಹುದು.
ಪ್ರಥಮ ಭೋಜ್ಯಪದಾರ್ಥ
ಭೋಜನವನ್ನು ಶುರು ಮಾಡುವಾಗ ಮೊದಲು ಲವಣರಸದಿಂದ ಶುರುಮಾಡಬೇಕು ಇದು ನಮ್ಮ ಜಾಠರಾಗ್ನಿಯನ್ನು ಉತ್ತೇಜಿಸುತ್ತದೆ.ನಂತರ ಶುಂಠಿಯನ್ನು ಸೇವಿಸಬೇಕು. ಇದರಿಂದ ನಮ್ಮ ಜೀರ್ಣಕ್ರೀಯೇ ಶೀಘ್ರವಾಗಿ ಆಗುತ್ತದೆ.
ಇದಾದನಂತರ ಮೊದಲು ಮಧುರ ರಸವಿರುವ ಪದಾರ್ಥವನ್ನು ಸೇವಿಸಬೇಕು. ತದನಂತರ ಕಟುರಸ ,ನಂತರ ತೀಕ್ಷ್ಣರಸದ ಪದಾರ್ಥವನ್ನು ಸ್ವೀಕರಿಸಬೇಕು.
ಮೊದಲಿಗೆ ತುಪ್ಪದಿಂದ ಕಠಿಣ ಅಥವ ಗಟ್ಟಿಯಾದ ಪದಾರ್ಥವನ್ನು(ರೋಟ್ಟಿ) ಸೇವಿಸಬೇಕು. ನಂತರ ಮೃದುವಾದ ಪದಾರ್ಥ(ಪಲಾವ್/ಅನ್ನ)ವನ್ನು, ತದನಂತರ ದ್ರವ ರೂಪದಲ್ಲಿರುವ ಪಧಾರ್ಥ(ಮೂಸರು) ಸ್ವೀಕರಿಸಬೇಕು.
ಭೋಜನದಲ್ಲಿ ಮೂದಲು ಮಧುರರಸ ಇರುವ ಪದಾರ್ಥದ ಸೇವನೆ ಮಾಡಬೇಕು,ನಂತರ ಭೋಜನದ ಮಧ್ಯದಲ್ಲಿ ಆಮ್ಲರಸ(ಉಳಿ) ಮತ್ತು ಲವಣ(ಉಪ್ಪು)ರಸ ಹೇಚ್ಚಿರುವ ಪದಾರ್ಥ ,ತದನಂತರ ಕಟ್ಟುರಸ(ಕಾರವಾಗಿರುವ),ತಿಕ್ತರಸ(ಕಹಿ) ಹಾಗು ಕಡೇಯದಾಗಿ ಕಷಾಯರಸ(ವಗರು)ಉಳ್ಳ ಪದಾರ್ಥವನ್ನು ಸೇವೆಸಬೇಕು.
ಸಿಹಿಯಾದ ತಿನಿಸು 2-3 ಬಗೆ ಇದ್ದಲ್ಲಿ,ಮೂದಲು ಕಡಿಮೆ ಮಧುರ ರಸ ಇರುವ ತಿನಿಸನ್ನು ಸೇವಿಸಿ ನಂತರ ಅದಕ್ಕಿಂತ ಹೇಚ್ಚು ಮಧುರ ರಸ ಇರುವ ಪದಾರ್ಥ.ಹೀಗೆ ಕಡಿಮೆ ಮಧುರ ರಸುಉಳ್ಳ ಪದಾರ್ಥದಿಂದ ಹೆಚ್ಚು ಮಧುರರಸವುಳ್ಳ ಆಹಾರವನ್ನು ಸೇವೆಸಬೇಕು.
ಅತಿ ಶೀಘ್ರದಲ್ಲಿ ಊಟಮಾಡುವುದರಿಂದ್ದ ಅದರ ಪಚನ ಹಾಗು ವಿಪಾಕ ಸೆರಿಯಾಗಿ ಆಗವುದಿಲ್ಲ.ಅತಿ ಮಂದಗತಿಯಲ್ಲಿ ಉಟಮಾಡುವುದರಿಂದ ಅದು ಅಹೃದಯವಾಗುತ್ತದೆ.ಅತೆ ಉಷ್ಣ ಅಥವ ಬಿಸಿ ಇರುವ ಪದಾರ್ಥ ಊಟಮಾಡುವುದರಿಂದ ಶರೀರ ಬಲ ನಾಷ್ಟವಾಗುತ್ತದೆ. ಅತ್ತ ತಣ್ಣಗಿರುವ ಅಥವ ಫ್ರಿಡ್ಜ್ನಲ್ಲಿರುವ ಆಹಾರ ಸೇವನೆ ಇಂದ ಜಾಠರಾಗ್ನಿ ಕಡಿಮೆಯಾಗುತ್ತದೆ. ಆದ್ದರಿಂದ ಬೆಚ್ಚಗಿರುವ ಆಹಾರ ಸೇವನೆ ಹಿತಕರ.
– ಡಾ.ಸಿಂಧು ಪ್ರಶಾಂತ್ (9743857575)
ಲೇಖಕರ ಬಗ್ಗೆ
ಡಾ. ಸಿಂಧು ಪ್ರಶಾಂತ್ ರವರು ಆಯುರ್ವೇದದ ಪದವಿಯನ್ನು ಹೊಂದಿದ್ದು ಎಮ್.ಡಿ (ಆಲ್ಟರ್ನೇಟಿವ್ ಮೆಡಿಸನ್) ನಂತರ ಎಮ್.ಎಸ್ಸಿ(ಯೋಗ) ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತಾ ಬೆಂಗಳೂರಿನಲ್ಲಿ 8 ವರ್ಷಗಳಿಂದ ಜನರಿಗೆ ಸೇವೆ ಸಲ್ಲಿಸುತಿದ್ದಾರೆ.
ಗರ್ಭಿಣಿಯರಿಗೆ ಯೋಗದ ಮಹತ್ವ ಹಾಗು ಗರ್ಭಿಣಿಯರು ಹೇಗೆ ಯೋಗವನ್ನು ಮಾಡಬೇಕು ಎಂದು ಹಲವಾರಿಗೆ ಹೇಳಿಕೂಡುತ್ತಿದ್ದಾರೆ. ಇದನ್ನು ಕುರಿತು ಪುಸ್ತಕವನ್ನು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ .ಸಿ೦ಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು. “ನೃತ್ಯ ಪ್ರಾರ್ಥನಾ” ಎಂಬ ಭರತನಾಟ್ಯದ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಷ್ಯವೃಂದ ತಯಾರಿಸುತಿರುವ ಹೇಗಳಿಕೆ ಇವರದು.