IPLನಲ್ಲಿ ಸೂಪರ್ ಪರ್ಫಾಮೆನ್ಸ್ ನೀಡಿದ ಸೂಪರ್ ಸ್ಟಾರ್ಸ್..! ಸೂಪರ್ ಸ್ಟಾರ್ಸ್ ಆಟಕ್ಕೆ ಎದುರಾಳಿಗಳು ಕಂಗಾಲ್..!

ಐಪಿಎಲ್, ಎಂದಾಕ್ಷಣ ನೆನಪಿಗೆ ಬರೋದು ಹೊಡಿಬಡಿ ಆಟ, ಸಿಕ್ಸರ್, ಬೌಂಡರಿ ಬಾರಿಸೋ ಆಟಗಾರರು. ತಂಡ ಸೋಲುವ ಹಂತದಲ್ಲಿ ಎದುರಾಳಿ ವಿಕೆಟ್ ಕಿತ್ತು ನೆರವಿಗೆ ಬರೋ ಬೌಲರ್ಸ್ಗಳು. ಸ್ಲಾಗ್ ಓವರ್ಸ್ನಲ್ಲಿ ತಂಡದ ಮೊತ್ತವನ್ನ ಹಿಗ್ಗಿಸುವ ಪವರ್ ಹಿಟ್ಟರ್ಸ್, ಇವೆರೆಲ್ಲಾ ಆಯಾ ತಂಡಗಳಿಗೆ ಆಪಾದ್ಬಾಂದವರು. ಆದ್ರೆ, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇವರೇ ಸೂಪರ್ ಸ್ಟಾರ್ಸ್, ಸೂಪರ್ ಮ್ಯಾನ್ಸ್. ಅಂಧಾಹಾಗೇ ಈ ಬಾರಿಯ ಐಪಿಎಲ್ನಲ್ಲಿ ಸೂಪರ್ ಸ್ಟಾರ್ಸ್ ಯಾರು ಅನ್ನೋದು ತೋರಿಸ್ತೀವಿ ನೋಡಿ..

ಸನ್ ರೈಸರ್ಸ್ ಪಾಲಿಗೆ ಬಾಹುಬಲಿ ಆದ ವಾರ್ನರ್..!
ಸನ್ ರೈಸರ್ಸ್ ಹೈದ್ರಾಬಾದ್ ಪರ ಕಣಕ್ಕಿಳಿಯುತ್ತಿದ್ದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ತಂಡದ ಪಾಲಿಗೆ ಬಾಹುಬಲಿ. 1 ವರ್ಷದ ಬಳಿಕ ಬ್ಯಾಟ್ ಇಡಿದು ಮೈದಾನಕ್ಕಿಳಿದ ವಾರ್ನರ್ ತಮ್ಮ ಬ್ಯಾಟಿಂಗ್ ಖದರ್ ಕಳೆದುಕೊಳ್ಳಲಿಲ್ಲ ಅನ್ನೋದನ್ನ ಈ ಬಾರಿಯ ಐಪಿಎಲ್ನಲ್ಲಿ ತೋರಿಸಿಕೊಟ್ಟಿದ್ದಾರೆ. ಎದುರಾಳಿ ಯಾರೇ ಇದ್ದರೂ ಹುಲಿಯಂತೆ ಮೈದಾನದಲ್ಲಿ ಹೋರಾಟ ನಡೆಸೋದ್ರಲ್ಲಿ ವಾರ್ನರ್ ಎಂದು ಮುಂದು. ಈ ಬಾರಿ ಜಾನಿ ಬೈರ್ ಸ್ಟೋ ಜೊತೆಗೂಡಿ ದಾಖಲೆ ಬರೆದಿರುವ ವಾರ್ನರ್ 12 ಪಂದ್ಯಗಳಿಂದ 692 ರನ್ ರನ್ ಕಲೆ ಹಾಕಿ ಟಿಂ.1 ಸ್ಥಾನದಲ್ಲಿದ್ದಾರೆ. ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಡೇವಿಡ್ ವಾರ್ನರ್ ತಂಡವನ್ನ ಗೆಲ್ಲಿಸಿಕೊಟ್ಟಿದ್ದಾರೆ. ಸನ್ ರೈಸರ್ಸ್ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದ್ರಲ್ಲಿ ಡೇವಿಡ್ ವಾರ್ನರ್ ಪಾತ್ರಬಹಳ ದೊಡ್ಡದು..

ಮಸಲ್ ಪವರ್ನಿಂದಲೇ ಅಬ್ಬರಿಸಿದ ಆ್ಯಂಡ್ರೊ ರಸ್ಸೆಲ್
ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಿಗೆ ಜಮೈಕನ್ ಕಿಂಗ್ ಆಂಡ್ರೋ ರಸ್ಸೆಲ್ ಕಿಂಗ್ ಆಗಿದ್ದಾರೆ. ಯೆಸ್ ಎದುರಾಳಿ ಯಾರೇ ಇರಲಿ, ಬೌಲರ್ ಯಾರೇ ಇರಲಿ, ಮೈದಾನ ಯಾವುದೇ ಇರಲಿ ಈ ಜಮೈಕನ್ ಕಿಂಗ್ ಸಿಕ್ಸರ್ ಗಡಿ ದಾಟಿಸೋದ್ರಲ್ಲಿ ಎತ್ತಿದ ಕೈ.. ಈ ಜಮೈಕನ್ ಕಿಂಗ್ ಒಮ್ಮೆ ಕ್ರೀಸ್ಗೆ ನೆಲ ಕಚ್ಚಿ ನಿಂತ್ರೆ ಮುಗೀತು ಎದುರಾಳಿಗಳು ಮೂಕ ಪ್ರೇಕ್ಷಕರಾಗುತ್ತಾರೆ.

ಟೂರ್ನಿಯಲ್ಲಿ 510 ರನ್ಗಳನ್ನು ಸಿಡಿಸಿರೋ ರಸೆಲ್ ಅರ್ಧಶತಕ ಸಿಕ್ಸರ್ ಸಿಡಿಸಿದ್ದಾರೆ. ಇನ್ನೂ ಬೆಸ್ಟ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಸ್ಲಾಗ್ ಓವರ್ಗಳಲ್ಲಿ ಎದುರಾಳಿಗಳಿ ಬೌಲರ್ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಈ ಮೂಲಕ ಕೋಲ್ಕತ್ತಾ ತಂಡದ ಮ್ಯಾಚ್ ವಿನ್ನರ್ ಎನಿಸಿದ್ದಾರೆ.

ಮುಂಬೈ ಮ್ಯಾಚ್ ಫಿನಿಷರ್ ಹಾರ್ದಿಕ್ ಪಾಂಡ್ಯಾ
ಈ ಬಾರಿ ಮುಂಬೈ ಪಾಲಿಗೆ ಅಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹಿರೋ ಆಗಿದ್ದಾರೆ. ಅಲ್ದೇ ತಂಡ ರನ್ ಬರ ಎದುರಿಸುವಾಗ ಬ್ಯಾಟ್ನಿಂದ ರನ್ ಮಳೆ ಹರಿಸೋ ಪಾಂಡ್ಯಾ, ನಂತರ ಎದುರಾಳಿ ವಿಕೆಟ್ ಉರುಳಿಸಿ ತಂಡದ ನೆರವಿಗೆ ಬಂದಿದ್ದಾರೆ. ಆಂಡ್ರೋ ರಸೆಲ್ಗಿಂತ ನಾನು ಅಪಾಯಕಾರಿ ಅನ್ನೋದನ್ನ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯಾ ತೋರಿಸಿಕೊಟ್ಟಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಫಾಸ್ಟೆಸ್ಟ್ ಆಫ್ ಸೆಂಚುರಿ ಬಾರಿಸಿದ ಕೀರ್ತಿ ಪಾಂಡ್ಯಾಗೆ ಸೇರುತ್ತೆ. ಈ ಬಾರಿ ಐಪಿಎಲ್ನಲ್ಲಿ ಹೆಲಿಕಾಪ್ಟರ್ ಶಾಟ್ಗಳನ್ನ ಹೊಡೆದು ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಈ ಬರೋಡ ಸ್ಟಾರ್ 15 ಪಂದ್ಯಗಳಿಂದ 393 ರನ್ ಕಲೆ ಹಾಕಿ 14 ವಿಕೆಟ್ ಪಡೆದಿದ್ದಾರೆ.

ಕಗಿಸೋ ರಬಡಾ-ಇಮ್ರಾನ್ ತಾಹೀರ್ ಕಮಾಲ್
ಟಿ20 ಲೀಗ್ಗಳಲ್ಲಿ ಬೌಲರ್ಗಳು ಗಮನ ಸೆಳೆಯೋದು ಅಷ್ಟಕ್ಕೆ ಅಷ್ಟೇ. ಆದ್ರೆ, ಬ್ಯಾಟ್ಸ್ಮನ್ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಬೌಲರ್ಗಳು ಕಗಿಸೋ ರಬಡಾ, ಇಮ್ರಾನ್ ತಾಹೀರ್ ಆಗಿದ್ದಾರೆ. 12 ಪಂದ್ಯಗಳಿಂದ 25 ವಿಕೆಟ್ ಉರುಳಿಸಿದ ಕಗಿಸೋ ರಬಡಾ ನಿಜವಾಗಿಯೂ ಬ್ಯಾಟ್ಸ್ಮನ್ಗಳಿಗೆ ಕಬ್ಬಿಣದ ಕಡಲೇ ಆಗಿದ್ದರು. ದುರಾದೃಷ್ಟ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರನಡೆಯಬೇಕಾಯ್ತು. ಡೆಲ್ಲಿ ಪ್ಲೇ ಆಫ್ ಪ್ರವೇಶಿಸದ ಹಿಂದೆ ರಬಡಾ ಶ್ರಮ ಹೆಚ್ಚಿದೆ.

ಚೆನ್ನೈ ತಂಡದ ಸಕ್ಸಸ್ನಲ್ಲಿ ಇಮ್ರಾನ್ ತಾಹೀರ್ ಇಮ್ರಾನ್ ಪ್ರಮುಖ ಪಾತ್ರವಹಿಸಿದ್ದಾರೆ. 15 ಪಂದ್ಯಗಳಿಂದ 23 ವಿಕೆಟ್ ಪಡೆದಿದ್ದಾರೆ. ಇವರಿಬ್ಬರ ಮಧ್ಯೆಯೂ 20 ವಿಕೆಟ್ ಪಡೆಯೋ ಮೂಲಕ ಕನ್ನಡಿಗ ಶ್ರೇಯಸ್ ಗೋಪಾಲ್ ಗಮನ ಸೆಳೆದಿದ್ದಾರೆ.

ಒಟ್ನಲ್ಲಿ ಈ ಬಾರಿಯ ಟ್ರಂಪ್ ಕಾರ್ಡ್ಗಳಾಗಿ ಗುರುತಿಸಿಕೊಂಡ ಇವ್ರ ಆಟ ಹೀಗೆ ಮುಂದುವರಿಯಲಿ ಎಂಬುವುದೇ ಕ್ರಿಕೆಟ್ ಪ್ರೇಮಿಗಳ ಅಭಿಲಾಷೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ