ವಿಶ್ವ ಆರ್ಥಿಕತೆಗೆ ಬೆದರಿಕೆಯಾದ ಯುಎಸ್-ಚೀನಾ ಬಿಕ್ಕಟ್ಟು

ಪ್ಯಾರಿಸ್,ಮೇ.08-ಇತ್ತೀಚೆಗೆ ಉಂಟಾಗಿರುವ ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಉದ್ವಿಗ್ನೆತೆಗಳು ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥ ಕ್ರಿಸ್ಟಿನ್ ಲಾಗರ್ಡ್ ಹೇಳಿದರು.

ಪ್ಯಾರಿಸ್‍ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆಯುತ್ತಿರುವ ಟ್ವೀಟ್‍ಗಳು ಮತ್ತು ವದಂತಿಗಳು ಎರಡು ದೇಶಗಳ ನಡುವಿನ ವ್ಯವಹಾರ ಒಪ್ಪಂದವು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಚೀನಾ ಅಮೆರಿಕಾ ರಫ್ತು ಮಾಡುವ ವಸ್ತುಗಳ ಮೇಲೆ 200 ಬಿಲಿಯನ್ ಡಾಲರ್ ಸುಂಕವನ್ನು ವಿಧಿಸಿದೆ ಎಂದು ಘೋಷಿಸಿದರು. ಇದರಿಂದ ಸಧ್ಯವಿರುವ ಶೇ 10ರಷ್ಟು ತೆರಿಗೆಯು ಶೇ 25ಕ್ಕೆ ಏರಲಿದೆ.

ಈ ಮಧ್ಯೆ ಚೀನಾದ ಉನ್ನತ ವ್ಯಾಪಾರ ಸಮಾಲೋಚಕ ಅಮೆರಿಕಾ ಸಮಾಲೋಚಕರರ ಜೊತೆ ಮಾತುಕತೆ ನಡೆಸಲು ಅಮೆರಿಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ