ಜಮುಯಿ,ಮೇ.08-ಬಿಹಾರದಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ಮಾವೋವಾದಿಗಳು ಆಭರಣ ವ್ಯಾಪಾರಿ ಮತ್ತು ಮಗಳ ಮೇಲೆ ಗುಂಡು ಹಾರಿಸಿದರು.
ಈ ಘಟನೆಯು ಪಾಟ್ನದಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ಜಮುಯಿನಲ್ಲಿ ನಡೆಯಿತು. 100 ರಿಂದ 150 ಮಾವೋವಾದಿಗಳು ರಾಜು ಷಾ ಮತ್ತು ಮಗಳು ನಿಕ್ಕಿ ಕುಮಾರಿಯವರ ಮನೆ ಸುತ್ತುವರೆದು, ಅವರನ್ನು ಲೂಟಿ ಮಾಡಿದರು. ಈ ಘಟನೆಯಲ್ಲಿ ಗಾಯಗೊಂಡ ತಂದೆ ಮತ್ತು ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸುಮಾರು 100 ರಿಂದ 150 ಮಾವೊವಾದಿಗಳು ರಾಜುರವರ ಮನೆಯನ್ನು ಸುತ್ತುವರೆದು, ಅವರಲ್ಲಿ 15 ರಿಂದ 20 ನಕ್ಸಲರು ಮನೆಯ ಒಳಗಡೆ ಪ್ರವೇಶಿಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಲು ಪ್ರಾರಂಭಿಸಿದರು. ಈ ಸಮಯದಲ್ಲಿ ಪ್ರತಿಭಟಿಸಿದ ರಾಜು ಮತ್ತು ಅವರ ಮಗಳ ಮೇಲೆ ಗುಂಡು ಹಾರಿಸಿದರು ಎಂದು ಅವರ ಸಂಬಂಧಿಕರಲ್ಲಿ ಒಬ್ಬರು ಹೇಳಿದರು.
ವ್ಯಾಪಾರಿಯ ಕೈಯಿಗೆ ಗುಂಡು ಹಾರಿಸಲಾಗಿದೆ ಮತ್ತು ಅವರ ಮಗಳ ಎರಡು ತೊಡೆಗಳಿಗೂ ಗುಂಡು ಹಾರಿಸಲಾಗಿದೆ ಹಾಗೂ ಇಬ್ಬರ ಸ್ಥಿತಿಯು ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದರು.
ಸ್ಥಳೀಯ ಆಡಳಿತವು ಸನ್ನಿವೇಶಕ್ಕೆ ತಕ್ಕಂತೆ ಸ್ಪಂಧಿಸಲಿಲ್ಲ ಎಂದು ರಾಜು ಅವರ ಸಂಬಂಧಿಗಳು ಹೇಳಿದರು. ಹಲವಾರು ಭಾರಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದರು.