ಉಳಿದ ಎರಡು ಲೋಕಸಭೆ ಚುನಾವಣೆಯ ಪ್ರಚಾರವು ವೇಗವನ್ನು ಪಡೆದಿದೆ. ಆರನೇ ಹಂತದ ಮತದಾನವು ಮೇ. 12ರಂದು ಏಳು ರಾಜ್ಯಗಳ 59 ಸಂಸತ್ ಕ್ಷೇತ್ರಗಳಲ್ಲಿ ನಡೆಯಲಿದೆ.
ಉತ್ತರ ಪ್ರದೇಶದ 14 ಸ್ಥಾನಗಳು, ಹರಿಯಾಣದ 10 ಸ್ಥಾನಗಳು, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮದ್ಯಪ್ರದೇಶದ ತಲಾ 8 ಸ್ಥಾನಗಳು, ದೆಹಲಿಯ ಏಳು ಸ್ಥಾನಗಳು ಮತ್ತು ಜಾರ್ಖಂಡ್‍ನ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 59 ಕ್ಷೇತ್ರಗಳಿಗೆ ಮೇ.12ರಂದು ಚುನಾವಣೆ ನಡೆಯಲಿದೆ.
ವಿವಿ ಪಕ್ಷಗಳ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ರ್ಯಾಲಿ ಮತ್ತು ಪ್ರಚಾರವನ್ನು ನಡೆಸಲಿದ್ದಾರೆ. 6ನೇ ಹಂತದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದೆ.
ಏಳನೇ ಮತ್ತು ಕೊನೆ ಹಂತದ ಮತದಾನವು ಮೇ 19ರಂದು ನಡೆಯಲಿದೆ ಮತ್ತು ಮತಗಳ ಏಣಿಕೆಯು ಈ ತಿಂಗಳ 23ರಂದು ನಡೆಯಲಿದೆ.