ಬೆಂಗಳೂರು, ಕಳೆದ ವರ್ಷದಂತೆ ಈ ವರ್ಷವೂ ರಾಜ್ಯದಲ್ಲಿ ಜಲಾಶಯಗಳು ಭತ್ತಿ ಹೋಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಜಲಾಶಯಗಳಿಗೆ ಸ್ವಲ್ಪ ನೀರು ಸಂಗ್ರಹವಾಗಿದೆಯಾದರೂ ಅದು ಅಷ್ಟು ಸಮಾಧಾನಕರವಾಗಿಲ್ಲ. ಈಗಾಗಲೇ ಕುಡಿಯುವ ನೀರಿಗೆ ಎಲ್ಲೆಡೆ ತೊಂದರೆ ಎದುರಾಗಿದೆ. ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.
ಮಳೆಗಾಲ ಸುರುವಾಗಲು ಇನ್ನೂ ಒಂದೆರೆಡು ತಿಂಗಳುಗಳಿದ್ದು ನೀರಿನ ಅಭಾವ ನಿಗಿಸುವುದು ಹೇಗೆ ಎಂದು ಸರ್ಕಾರ ತಲೆ ಕೆಡಿಸಿಕೊಳ್ಳುವಂತಾಗಿದೆ.ಒಂದು ವೇಳೆ ನೀರಿನ ಅಭಾವ ಮಿತಿ ಮೀರಿದರೆ ಮೋಡ ಬಿತ್ತನೆಯ ಮೋರೆ ಹೋಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯಕ್ಕೆ ಜಲಾಶಯಗಳ ನೀರಿನ ಸಂಗ್ರಹದ ಮಾಹಿತಿ ಹೀಗಿದೆ.
ಜಲಾಶಯಗಳು ಸಾಮಥ್ರ್ಯ ಪ್ರಸಕ್ತವರ್ಷ ಕಳೆದವರ್ಷ
ಲಿಂಗನಮುಕ್ಕಿ 1819.00 1764.95 1760.45
ಸೂಪ 1849.92 1759.49 1757.69
ವರಹಿ 1949.50 1890.26 1757.69
ಹಾರಂಗಿ 2859.00 2805.19 2805.96
ಹೇಮಾವತಿ 2922.00 2865.00 2863.10
ಕೆಆರ್ಎಸ್ 124.80 84.21 71.80
ಕಬಿನಿ 2284.00 2261.14 2254.99
ಭದ್ರ 2158.00 2105.70 2085
ತುಂಗಭದ್ರ 1633.00 1577.74 1576.76
ಘಟಪ್ರಭ 2175.00 2088.10 2091.41
ಮಲಪ್ರಭ 2079.50 2038.47 2039.87
ಆಲಮಟ್ಟಿ 1704.811 673.41 1668.36
ನಾರಾಯಣಪುರ 1615.00 1599.24 1598.04