ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಪವರ್ ಪ್ಲೇ ಮಾನದಂಡ: ಪವರ್ ಪ್ಲೇಯಲ್ಲಿ ಎಡವಿದ್ದಾರೆ ಸ್ಟಾರ್ ಬ್ಯಾಟ್ಸ್ಮನ್ಗಳು

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಲೀಗ್ ಹಂತ ಮುಕ್ತಾಯವಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿ ಹಲವಾರು ಅಚ್ಚರಿಗಳನ್ನ ಕೊಟ್ಟಿದೆ. ಅದರಲ್ಲೂ ಪಂದ್ಯವನ್ನ ಪವರ್ಪ್ಲೇ ಬ್ಯಾಟ್ಸ್ಮನ್ಗಳ ಪಾಲಿಗೆ ವಿಲನ್ ಆಗಿದೆ. ಎಲ್ಲ ತಂಡಗಳು ಪವರ್ ಪ್ಲೇ ಬಗ್ಗೆ ತಲೆ ಕೆಡಿಸಿಕೊಂಡಿವೆ.

ಪವರ್ ಪ್ಲೇಯಲ್ಲಿ ಫ್ಲಾಪ್ ಆಗಿದ್ದಾರೆ ಬ್ಯಾಟ್ಸ್ಮನ್ಸ್ಗಳು
ಈ ಬಾರಿ ಐಪಿಎಲ್ನಲ್ಲಿ ಬಹುತೇಕ ಬ್ಯಾಟ್ಸ್ಮನ್ಗಳು ರನ್ಗಳ ಹೊಳೆಯನ್ನ ಹರಿಸಿದ್ದಾರೆ. ಆದರೆ ಪವರ್ ಪ್ಲೇ ವಿಷಯಕ್ಕೆ ಬಂದಾಗ ಪವರ್ಲೆಸ್ ಬ್ಯಾಟ್ಸ್ಮನ್ಗಗಳಾಗಿದ್ದಾರೆ. ಪವರ್ ಪ್ಲೇ ಈ ಬಾರಿ ಬ್ಯಾಟ್ಸ್ಮನ್ಗಳ ಪಾಲಿಗೆ ಬಿಸಿ ತುಪ್ಪವಾಗಿದೆ. ಪವರ್ ಪ್ಲೇಯಲ್ಲಿ ಬ್ಯಾಟ್ಸ್ಮನ್ಗಳು ಬೌಲರ್ಸ್ಗಳೆದುರು ಡಲ್ ಹೊಡೆದಿದ್ದಾರೆ.

ಪವರ್ ಪ್ಲೇಯಲ್ಲಿ ಬೌಲರ್ಸ್ಗಳ ಪವರ್ಫುಲ್ ಬೌಲಿಂಗ್
ಲೀಗ್ ಹಂತದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳು ಬೌಲರ್ಗಳ ಮೇಲೆ ಸವಾರಿ ಮಾಡಿದ್ದಾರೆ. ಆದರೆ ಪವರ್ ಪ್ಲೇಯಲ್ಲಿ ಬೌಲರ್ಸ್ಗಳೆ ಕಿಂಗ್ ಮೆರೆದಾಡಿದ್ದಾರೆ. ಐಪಿಎಲ್ ಆಡುತ್ತಿರುವ ಎಲ್ಲ ತಂಡಗಳ ಸ್ಟಾರ್ ಬ್ಯಾಟ್ಸ್ಮನ್ಗಳು ಪವರ್ ಪ್ಲೇಯಲ್ಲಿ ಎದುರಾಳಿ ಬೌಲರ್ಸ್ಗಳೆದುರು ಪವರ್ಫುಲ್ ಬ್ಯಟಿಂಗ್ ತೋರಿಸುವಲ್ಲಿ ಎಡವಿದ್ದಾರೆ.

ಪಂಜಾಬ್ ಸೋಲಿಗೆ ಕಾರಣವಾಯಿತು ಪವರ್ ಪ್ಲೇ
ಈ ಬಾರಿಯ ಟೂರ್ನಿಯಲ್ಲಿ ಪವರ್ ಪ್ಲೇ ಎಷ್ಟು ಪ್ರಾಮುಖ್ಯತೆ ಪಡೆದಿದೆ ಅನ್ನೋದಕ್ಕೆ ತಾಜಾ ಉದಾಹರಣೆ ಅಂದ್ರೆ ಅದು ಪಂಜಾಬ್ ತಂಡ. ಕೇರಂ ಸ್ಪಿನ್ನರ್ ಆರ್. ಅಶ್ವಿನ್ ನೇತೃತ್ವದ ಪಂಜಾಬ್ ತಂಡ ಲೀಗ್ ಹಂತದಲ್ಲೆ ಟೂರ್ನಿಯಿಂದ ಹೊರ ಬಿದ್ದೆ ತಂಡದಲ್ಲಿ ಕ್ರಿಸ್ ಗೇಲ್ನಂತ ಸ್ಟಾರ್ ಬ್ಯಾಟ್ಸ್ಮನ್ಗಳಿದ್ರು. ಪ್ಲೇ ಆಫ್ ತಲುಪಲು ಆಗದೇ ಕಿಕ್ಔಟ್ ಆಗಿದೆ. ಪಂಜಾಬ್ ಸೋಲಿಗೆ ಕಾರಣವಾಗಿದ್ದು ಇದೇ ಪವರ್ ಪ್ಲೇ. ಬಹುತೇಕ ಪಂದ್ಯಗಳಲ್ಲಿ ಪಂಜಾಬ್ ತಂಡ ಪವರ್ ಪ್ಲೇಯಲ್ಲಿ ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಎಡವಿದ್ದೆ ಸಾಲು ಸಾಲು ಪಂದ್ಯಗಳನ್ನ ಕೈಚೆಲ್ಲಿಕೊಳ್ಳಬೇಕಾಯಿತು. ಇದರ ಬಗ್ಗೆ ಸ್ವತಃ ಕ್ಯಾಪ್ಟನ್ ಆರ್.ಅಶ್ವಿನ್ ಹೇಳಿದ್ದಾರೆ.

ಪವರ್ ಪ್ಲೇಯಲ್ಲಿ ಟಾಪ್ ಬ್ಯಾಟ್ಸ್ಮನ್ಗಳ ಸಾಧನೆ
ಚೆನ್ನೈ ತಂಡದ ಓಪನರ್ ಫಾಫ್ ಡುಪ್ಲೆಸಿಸ್ ಪವರ್ ಪ್ಲೇಯಲ್ಲಿ 8 ಪಂದ್ಯಗಳಿಂದ 103 ರನ್ ಕಲೆ ಹಾಕಿದ್ದಾರೆ. ಇನ್ನು ಇದೇ ತಂಡದ ಮತ್ತೊಬ್ಬ ಓಪನರ್ ಶೇನ್ ವ್ಯಾಟ್ಸನ್ 13 ಪಂದ್ಯಗಳಿಂದ 144 ರನ್ ಗಳಿಸಿದ್ದಾರೆ. ಪಂಜಾಬ್ ತಂಡದ ಓಪನರ್ ಕೆ.ಎಲ್. ರಾಹುಲ್ 13 ಪಂದ್ಯಗಳಿಂದ 177 ರನ್ ಗಳಿಸಿದ್ದಾರೆ. ಡೆಲ್ಲಿ ತಂಡದ ಓಪನರ್ ಪೃಥ್ವಿ ಶಾ 13 ಪಂದ್ಯಗಳಿಂದ 169 ರನ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ 11 ಪಂದ್ಯಗಳಿಂದ 147 ರನ್ ಕಲೆ ಹಾಕಿದ್ದಾರೆ.

ಪವರ್ ಪ್ಲೇಯಲ್ಲಿ ಅಬ್ಬರಿಸಿದ್ರೆ ಐಪಿಎಲ್ ಟ್ರೋಫಿ ಗೆದ್ದಂತೆ
ಪವರ್ ಪ್ಲೇ ಈ ಬಾರಿಯ ಟೂರ್ನಿಯಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪವರ್ ಪ್ಲೇಯಲ್ಲಿ ಬ್ಯಾಟ್ಸ್ಮನ್ಗಳು ಪವರ್ಫುಲ್ ಬ್ಯಾಟಿಂಗ್ ಮಾಡಿದ್ರೆ ಮಾತ್ರ ಆ ಪಂದ್ಯವನ್ನ ಗೆಲ್ಲಲು ಸಾಧ್ಯವೆಂಬುದು ಈ ಬಾರಿ ಟೂರ್ನಿಯ ಅಂಕಿ ಅಂಶಗಳು ಹೇಳುತ್ತವೆ. ಪವರ್ಪ್ಲೇಯಲ್ಲಿ ಯಾವ ತಂಡಗಳು ಯಶಸ್ಸು ಕಾಣುತ್ತವೋ ಆ ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುತ್ತೆ ಅನ್ನೋದು ಕ್ರಿಕೆಟ್ ಎಕ್ಸ್ಪರ್ಟ್ಗಳ ಲೆಕ್ಕಚಾರವಾಗಿದೆ.

ಒಟ್ಟಾರೆ ಈ ಬಾರಿಯ ಐಪಿಎಲ್ನಲ್ಲೂ ಪವರ್ಪ್ಲೇ ಟ್ರೋಫಿ ಗೆಲ್ಲಲು ಮಾನದಂಡವಾಗಿದೆ ಅನ್ನೊದನ್ನ ಎಲ್ಲ ತಂಡಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ