ಅಮೇಠಿ ಮತಗಟ್ಟೆಯಲ್ಲಿ ಅಧಿಕಾರಿಗಳಿಂದ ಕಾಂಗ್ರೆಸ್ ಗೆ ಬಲವಂತವಾಗಿ ಮತಹಾಕಿಸಿಕೊಳ್ಳಲಾಗುತ್ತಿದೆ: ಸ್ಮೃತಿ ಇರಾನಿ ಆರೋಪ

ನವದೆಹಲಿ: ಅಮೇಠಿಯ ಮತಗಟ್ಟೆಯೊಂದರಲ್ಲಿ ಮತಗಟ್ಟೆ ಅಧಿಕಾರಿಗಳೇ ಬಲವಂತದಿಂದ ಕಾಂಗ್ರೆಸ್ ಗೆ ಮತ ಹಾಕುವಂತೆ ಮತಹಾಕಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಬಿಜೆಪಿಗೆ ಮತ ಹಾಕಲು ಬಯಸಿದ್ದ ವೃದ್ಧೆಯೊಬ್ಬರಿಂದ ಬಲವಂತವಾಗಿ ಕಾಂಗ್ರೆಸ್ ಗುರುತಿನ ಗುಂಡಿ ಒತ್ತಿಸಲಾಗಿದೆ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

‘ನಾನು ಕಮಲದ ಚಿಹ್ನೆಗೆ ಮತ ಹಾಕಲು ಬಯಸಿದ್ದೆ. ಆದರೆ ನನ್ನ ಕೈ ಹಿಡಿದು ಕಾಂಗ್ರೆಸ್‌ ಚಿಹ್ನೆಗೆ ಬಲವಂತದಿಂದ ಮತ ಹಾಕಿಸಲಾಯಿತು’ ಎಂದು ಮಹಿಳೆಯೊಬ್ಬರು ಹೇಳುತ್ತಿರುವ ವೀಡಿಯೋವನ್ನು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತಗಟ್ಟೆ ವಶೀಕರಣ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.

ಉತ್ತರ ಪ್ರದೇಶದ ಗೌರಿಗಂಜ್‌ನಲ್ಲಿ ಈ ಘಟನೆ ನಡೆದಿದೆ. ಇದು ಅಮೇಠಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಬಲ ಎದುರಾಳಿಯಾಗಿ ಬಿಜೆಪಿಯ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.

Smriti Irani Posts Video Of Amethi Voter Saying She Was Forced To Vote For Congress, Alleges Her Rival ‘Rahul Gandhi Ensured Booth Capturing’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ