ರಷ್ಯಾದಲ್ಲಿ ವಿಮಾನ ದುರಂತ; ಇಬ್ಬರು ಮಕ್ಕಳು ಸೇರಿದಂತೆ 41 ಜನ ಸಾವು

ಮಾಸ್ಕೋ: ಪ್ರಯಾಣಿಕರ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಾಗ ಉಂಟಾದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 41 ಜನ ಸಾವನ್ನಪ್ಪಿರು ಘಟನೆ ರಷ್ಯಾದ ಮಾಸ್ಕೋ ನಗರದಲ್ಲಿ ಭಾನುವಾರ ನಡೆದಿದೆ.

ರಷ್ಯಾದ ಸುಖೋಯ್ ಸೂಪರ್​ಜೆಟ್ 100 ವಿಮಾನ ಮಾಸ್ಕೋದಿಂದ ನಿನ್ನೆ ಇಳಿಸಂಜೆ 78 ಜನ ಪ್ರಯಾಣಿಕರ ಜೊತೆ ಮರ್ಮನ್ಸ್ಕ್ ನಗರಕ್ಕೆ ಹಾರಾಟ ಆರಂಭಿಸಿತ್ತು.

ಆದರೆ, ಹಾರಾಟ ಆರಂಭಿಸಿದ್ದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪೈಲಟ್​ಗಳು ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ವೇಳೆ  ರನ್​ವೇಗೆ ಇಳಿಯುತ್ತಿದ್ದಂತೆ ವಿಮಾನ ನೆಲಕ್ಕೆ ಅಪ್ಪಳಿಸಿ ಇಂಜಿನ್​ನಲ್ಲಿ ಅಗ್ನಿ ಕಾಣಿಸಿಕೊಂಡಿದೆ.

ಪರಿಣಾಮ ವಿಮಾನದ ಮುಂಬದಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, 41 ಜನ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ ಈ ಹಿಂದೆ 2018 ಫೆಬ್ರವರಿ 11 ರಂದು ಅಂಟೋನೋವಾ ಎಎನ್ 148 ಹೆಸರಿನ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಈ ಅವಘಡದಲ್ಲೂ ಸುಮಾರು 71 ಪ್ರಯಾಣಿಕರು ಸಾವನ್ನಪ್ಪಿದ್ದರು. ರಷ್ಯಾ ವಿಮಾನಯಾನ ಇತಿಹಾಸದಲ್ಲಿ ಇದೊಂದು ದೊಡ್ಡ ದುರಂತ ಎಂದು ಬಣ್ಣಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ