
ನವದೆಹಲಿ, ಮಾ.23-ಬ್ರಿಟನ್ ಮೂಲದ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಫೇಸ್ಬುಕ್ ದತ್ತಾಂಶ ಹಗರಣದಲ್ಲಿ ಕಾಂಗ್ರೆಸ್ ಮೇಲೆ ಆರೋಪ ಮಾಡಿರುವ ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಹರಿಹಾಯ್ದಿದ್ದಾರೆ. ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಸಕ್ರಿಯವಾಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಬಗ್ಗೆ ಬಿಜೆಪಿ ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿ ಪಕ್ಷದ ವರ್ಚಸ್ಸಿಗೆ ಕುಂದುಂಟು ಮಾಡುತ್ತಿದೆ ಎಂದು ಆರೋಪಿದರು. ಬಿಜೆಪಿ ಸತ್ಯ ಸಂಗತಿಯನ್ನು ಮರೆ ಮಾಚಿ, ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದೆ. ಈ ಮೂಲಕ ಅದರ ಸುಳ್ಳು ಕಾರ್ಖಾನೆ ಮತ್ತೆ ಸಕ್ರಿಯವಾಗಿದೆ ಎಂದು ರಾಹುಲ್ ಟ್ವೀಟರ್ನಲ್ಲಿ ಆರೋಪಿಸಿದ್ದಾರೆ.