ಬೆಂಗಳೂರು, ಏ.30- ಸಂವಿಧಾನದ ಅನುಚ್ಛೇದ 14ರ ಮತ್ತು 46ರಂತೆ ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಆರ್ಥಿಕವಾಗಿ ಸಶಕ್ತಿಕರಣಗೊಂಡು ಸಮಾಜದ ಮುಖ್ಯವಾಹಿನಿಗೆ ತರುವಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ಕೊರವ-ಕೊರಚ-ಕೊರವ ಸಮುದಾಯಗಳ ಒಕ್ಕೂಟ) ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ ಅವರು ಸ್ವಾಗತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವೇಳೆ ರಾಜ್ಯ ಸರ್ಕಾರ ಆದಿವಾಸಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳ ಒಂದೆಡೆ ನೆಲೆನಿಲ್ಲಲಾಗದೇ ಪರದಾಡುತ್ತಿದ್ದಾರೆ.ಅದರಿಂದ ಸರ್ಕಾರಿ ಸೂಕ್ತ ಮೂಲಭೂತ ಸೌಲಭ್ಯಗಳನ್ನು ನೀಡಿ ಸಹಕಾರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 10ಲಕ್ಷಕ್ಕೂ ಹೆಚ್ಚಾಗಿರುವ ಕೀಳುವ ಸಮುದಾಯಗಳ ಹಂದಿ ಸಾಕಾಣಿಕೆಯ ವೃತ್ತಿಯನ್ನು ಅವಲಂಬಿಸಿದೆ. ಇವರಿಗೆ ಆಧುನಿಕ ಸ್ಪರ್ಶವನ್ನು ನೀಡಿ ಜಾಗತಿಕ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಒದಗಿಸಿ ಅವರು ಬದುಕು ಹಸನುಗೊಳಬೇಕಿದೆ ಎಂದರು.
ಮಹಾನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯತ್ ಸ್ವಚ್ಛತೆ ನೈರ್ಮಲ್ಯ ಮತ್ತು ಸಮುದಾಯ ಆರೋಗ್ಯದ ನೆಪದಲ್ಲಿ ಸಾವಿರಾರು ಬಂಧುಗಳನ್ನು ಹಿಡಿದು ಅವುಗಳನ್ನು ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡ್ತಿದ್ದಾರೆ ಎಂದು ಇದೇ ವೇಳೆ ದೂರಿದರು.
ತುಮಕೂರು ಹಾಗೂ ಚಿತ್ರದುರ್ಗದ ಭಾಗಗಳಲ್ಲಿ ಈ ರೀತಿ ಕೆಲಸಗಳು ಹೆಚ್ಚಾಗಿದ್ದು, ಇನ್ನು ಹೈಕೋರ್ಟ್ ನೀಡಿರುವ ತೀರ್ಪನ್ನು ಮೂರು ತಿಂಗಳ ಒಳಗೆ ಜಾರಿತರಬೇಕು.ಇಲ್ಲದಿದ್ದರೆ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮಾಡುವುದಾಗಿ ಎಚ್ಚರಿಸಿದರು.