ಇಂದಿನ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್-ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ ಹೈವೋಲ್ಟೇಜ್ ಮ್ಯಾಚ್ಗೆ ಸಾಕ್ಷಿಯಾಗಲಿದೆ. ಮೊನ್ನೆ ಧೋನಿ ಕೋಟೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಅಂಬಾನಿ ಬ್ರಿಗೇಡಿಯರ್ಸ್ ಈಗ ಗೆಲುವಿನ ಟ್ರ್ಯಾಕ್ಗೆ ಮರಳಿದೆ.
ಈಗಾಗಲೇ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ಗೆ ಈ ಪಂದ್ಯ ಗೆದ್ದು ಪ್ಲೇ ಆಫ್ ಕನಸು ನನಸಾಗಿಸಿಕೊಳ್ಳಲು ಕೆಕೆಆರ್ಗೆ ಖೆಡ್ಡಾ ತೋಡಿದೆ. ಇನ್ನೂ ಕೋಲ್ಕತ್ತಾ ನೈಟ್ ರೈಡರ್ಸ್ಗೂ ಮುಂದಿನ ಎಲ್ಲಾ ಪಂದ್ಯಗಳು ಡು ಆರ್ ಡೈ ಮ್ಯಾಚ್ಗಳಾಗಿದ್ದು ಮುಂದಿನ ಹಂತಕ್ಕೇರಲು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಗೆಲುವಿನ ಮಂತ್ರ ಜಪಿಸುತ್ತಿದೆ ಡಿ.ಕೆ.ಗ್ಯಾಂಗ್
ಹೌದು.. ಟೂರ್ನಿಯ ಆರಂಭದಲ್ಲಿ ಗೆಲುವಿನ ಸಿಹಿ ಕಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಸಾಲು ಸಾಲು ಸೋಲು ಎದುರಾಗಿವೆ. ಸತತ 6 ಸೋಲು ಅನುಭವಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಮಂತ್ರ ಜಪಿಸುತ್ತಿದೆ. ನಾಯಕ ದಿನೇಶ್ ಕಾರ್ತಿಕ್ ಫಾರ್ಮ್ ಮರಳಿದ್ದು ತಂಡದ ಚಿಂತೆ ಕಡಿಮೆ ಮಾಡಿದೆ.
ನಿತೀಶ್ ರಾಣಾ, ಮ್ಯಾಚ್ ವಿನ್ನರ್ ಆಂಡ್ರೋ ರಸೆಲ್ ಅಬ್ಬರಿದ್ರೆ, ಕೋಲ್ಕತ್ತಾಗೆ ಗೆಲುವು ಸುಲಭವಾಗಲಿದೆ. ಇನ್ನೂ ಕೋಲ್ಕತ್ತಾ ಬೌಲರ್ಗಳಿಂದ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ತಂದ್ರು, ಉತ್ತಮ ಪ್ರದರ್ಶನ ನೀಡದಿರುವುದು ದಿನೇಶ್ ಆತಂಕಕ್ಕೆ ಕಾರಣವಾಗಿದೆ.ಒಟ್ನಾಲ್ಲಿ ಇಂದಿನ ಉಭಯ ಪಂದ್ಯಗಳು ರೋಚಕತೆಯ ಜೊತೆಗೆ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡೋದಂತೂ ಖಂಡಿತಾ…