ಕಲರ್ಫುಲ್ ಟೂರ್ನಿಗೆ ಆವರಿಸಿದೆ ಕಾರ್ಮೊಡ: ಐಪಿಎಲ್ಗೆ ಗುಡ್ ಬೈ ಹೇಳಲಿದ್ದಾರೆ ಫಾರಿನ್ ಪ್ಲೇಯರ್ಸ್

ಈ ಬಾರಿಯ ಕಲರ್ಫುಲ್ ಟೂರ್ನಿ ಐಪಿಎಲ್ ಸಖತ್ Entertainment ನಿಂದ ಕೂಡಿದೆ. ಈ ಹಿಂದಿನ ಸೀಸ್ಗಿಂತ ತುಂಬ ಡಿಫರೆಂಟ್ ಆಗಿರುವ ಈ ಬಾರಿಯ ಬಿಲಿಯನ್ ಡಾಲರ್ ಟೂರ್ನಿ ಅಚ್ಚರಿ ಫಲಿತಾಂಶಗಳನ್ನ ಕೊಟ್ಟಿದೆ.

ಬ್ಯಾಟ್ಸ್ಮನ್ಗಳು ಬೌಂಡರಿ, ಸಿಕ್ಸರ್ಗಳ ಮೂಲಕ ಅಬ್ಬರಿಸುತ್ತಿದ್ದಾರೆ.ಟೂರ್ನಿ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದ್ದು, ಹಲವು ರೋಚಕ ಪಂದ್ಯಗಳಿಗೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಆರಂಭದಲ್ಲಿ ಸತತ ಸೋಲುಗಳನ್ನ ಅನುಭವಿಸಿದ್ದ ತಂಡಗಳು ಈಗ ಗೆಲುವಿನ ಲಯಕ್ಕೆ ಮರಳಿವೆ.ಹೀಗಾಗಿ ಯಾವ ತಂಡ ಪ್ಲೇ ಆಫ್ಗೆ ಎಂಟ್ರಿ ನೀಡಲಿವೆ ಅನ್ನೋ ಕುತೂಹಲ ಮೂಡಿದೆ. ಆದರೆ ಟೂರ್ನಿ ಮಧ್ಯದಲ್ಲೆ ಎಲ್ಲ ತಂಡಗಳ ಫ್ರಾಂಚೈಸಿಗಳಿಗೆ ಶಾಕ್ ಒಂದು ಕಾದಿದೆ.
ಐಪಿಎಲ್ಗೆ ಫ್ರಾಂಚೈಸಿಗಳಿಗೆ ಬಿಗ್ ಶಾಕ್..!

ಕಲರ್ಫುಲ್ ಟೂರ್ನಿ ಕಳೆಗುಂದುವ ಆತಂಕ ಎದುರಿಸುತ್ತಿದೆ. ವಿಶ್ವಕಪ್ ಸಿದ್ಧತೆಗಾಗಿ ಫಾರಿನ್ ಪ್ಲೇಯರ್ಸ್ ತಮ್ಮ ತವರಿಗೆ ಮರಳುತ್ತಿರೋದೆ, ಇದಕ್ಕೆ ಕಾರಣ.ಐಪಿಎಲ್ನಲ್ಲಿ ವಿವಿಧ ತಂಡಗಳ ಪರ ಆಡುತ್ತಿರುವ ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ,ಬಾಂಗ್ಲಾದೇಶಗಳ ಆಟಗಾರರು,ಮೇ ಮೊದಲ ವಾರದೊಳಗಾಗಿ, ಕಲರ್ಫುಲ್ ಟೂರ್ನಿಗೆ ಗುಡ್ ಬೈ ಹೇಳಲಿದ್ದಾರೆ.

ಇದರಲ್ಲಿ ಈಗಾಗಲೇ ಕೆಲ ಆಟಗಾರರು ತವರಿನ ಕಡೆ ಪ್ರಯಾಣ ಬೆಳೆಸಿದ್ದಾರೆ.ಭುಜದ ನೋವಿನಿಂದಾಗಿ ಡೇಲ್ ಸ್ಟೇನ್,ವಾರದ ಮೊದಲೇ ಟೂರ್ನಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಸನ್ರೈಸರ್ಸ್ ಹೈದ್ರಬಾದ್ ತಂಡದ ಓಪನರ್ ಜಾನಿ ಬೇರ್ಸ್ಟೋ ಈಗಾಗಲೇ ತವರಗೆ ಮರಳಿದ್ದಾರೆ. ಆದ್ರೆ ವೆಸ್ಟ್ ಇಂಡೀಸ್,ಅಪ್ಘಾನಿಸ್ತಾನ, ನ್ಯೂಜಿಲೆಂಡ್ ಆಟಗಾರರು ಸಂಪೂರ್ಣ ಟೂರ್ನಿ ಆಡಲಿದ್ದಾರೆ. ಪಾಕಿಸ್ತಾನ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡುವುದಕ್ಕಾಗಿ ಇಂಗ್ಲೆಂಡ್ ಪ್ಲೇಯರ್ಸ್, ಮೊದಲಿಗರಾಗಿ ಐಪಿಎಲ್ನಿಂದ ಜಾಗ ಖಾಲಿ ಮಾಡಲಿದ್ದಾರೆ.

ಈಗಾಗಲೇ ಈ ಎಲ್ಲಾ ಆಟಗಾರರಿಗೆ ಆಯಾ ದೇಶದ ಕ್ರಿಕೆಟ್ ಮಂಡಳಿಗಳು ಈ ಬಗ್ಗೆ ಸೂಚನೆ ನೀಡಿವೆ. ಮೊದಲ ವಾರದಲ್ಲಿ 17 ಆಟಗಾರರು ಹೊರ ನಡೆಯಲಿದ್ದಾರೆ. ಆ ಆಟಗಾರರು ಯಾರು ಅನ್ನೊದನ್ನ ತೋರಿಸ್ತೀವಿ ನೋಡಿ

ಚೆನ್ನೈ ಸೂಪರ್ ಕಿಂಗ್ಸ್: ಫಾಫ್ ಡುಪ್ಲೆಸಿಸ್, ಇಮ್ರಾನ್ ತಾಹಿರ್
ಆರ್ಸಿಬಿ: ಮೊಯಿನ್ ಅಲಿ, ಮಾರ್ಕಸ್ ಸ್ಟೋಯ್ನಿಸ್, ಹೆನ್ರಿಕ್ ಕ್ಲಾಸೆನ್
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೋಫ್ರಾ ಆರ್ಚರ್
ಸನ್ರೈಸರ್ಸ್: ಡೇವಿಡ್ ವಾರ್ನರ್, ಜಾನಿ ಬೇರ್ ಸ್ಟೋ, ಶಕೀಬ್ ಅಲ್ ಹಸನ್
ಮುಂಬೈ ಇಂಡಿಯನ್ಸ್: ಜೆಸನ್ ಬೆಹ್ರನ್ಡ್ರಾಫ್, ಕ್ವಿಂಟನ್ ಡಿಕಾಕ್
ಕಿಂಗ್ ಇಲೆವೆನ್ ಪಂಜಾಬ್: ಡೇವಿಡ್ ಮಿಲ್ಲರ್
ಡೆಲ್ಲಿ ಕ್ಯಾಪಿಟಲ್ಸ್:ಕಗಿಸೋ ರಬಾಡ
ಕೋಲ್ಕತ್ತಾ ನೈಟ್ ರೈಡರ್ಸ್: ಜೋ ಡೆನ್ಲಿ

ಒಟ್ಟಿನಲ್ಲಿ ವಿದೇಶಿ ಆಟಗಾರರಿಂದಾಗಿ ಫೇಮಸ್ ಆಗಿರುವ ಐಪಿಎಲ್ ಸ್ಟಾರ್ ಆಟಗಾರರಿಲ್ಲದೇ ಎಲ್ಲ ಫ್ರಾಂಚೈಸಿಗಳು ಹೇಗೆ ಪರಿಸ್ಥಿತಿಯನ್ನ ನಿಭಾಯಿಸುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ