ನವದೆಹಲಿ: ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್, ರಾಜಕೀಯ ಎಲ್ಲಾ ಕಡೆಯೂ ಒಂದೇ ರೀತಿಯಲ್ಲಿದೆ. ರಾಜಕೀಯದಲ್ಲಿ ಗದ್ದಲ ಹೆಚ್ಚು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಬೇರೆಯವರು ಭಾಷಣ ಮಾಡಿ ಮತಗಳನ್ನು ಗಳಿಸಬಹುದು. ಆದರೆ, ಅದು ನನಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಒಂದು ವೇಳೆ ನಾನೇನಾದರು ರಾಜಕೀಯಕ್ಕೆ ಬಂದರೆ ನನ್ನ ಪತ್ನಿ ನನ್ನನ್ನು ತೊರೆದು ಹೋಗುವುದಾಗಿ ತಿಳಿಸಿದ್ದಾರೆ ಎಂದೂ ಹೇಳಿದ್ದಾರೆ.
ರಾಜಕೀಯದಲ್ಲಿ ನನಗೆ ಆಸಕ್ತಿಯಿಲ್ಲ ಹಾಗಾಗಿ ಯಾವುದೇ ರಾಜಕೀಯ ಪಕ್ಷ ಸ್ಥಾಪಿಸುವ ಉದ್ದೇಶವೂ ನನಗಿಲ್ಲ. ನನ್ನ ಬರವಣಿಗೆಗಳು ನಿಮ್ಮ ಮುಂದಿವೆ. ನನ್ನ ನಿಲುವುಗಳು ಮತ್ತು ಅಭಿಪ್ರಾಯಗಳೇನು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯಕ್ಕೆ ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಏನಾಗಿದ್ದೇನೆಯೋ ಅದರಲ್ಲಿ ಖುಷಿ ಇದೆ. ನಾನು ಶೈಕ್ಷಣಿಕ ಕ್ಷೇತ್ರದ ಕೆಲಸವನ್ನು ಇಷ್ಟ ಪಡುತ್ತೇನೆ. ಶೈಕ್ಷಣಿಕ ಕ್ಷೇತ್ರದಲ್ಲಿಯೇ ತೊಡಗಿಕೊಂಡಿದ್ದೇನೆ. ನಾನು ಈಗ ನಿಭಾಯಿಸುತ್ತಿರುವ ಜವಾಬ್ದಾರಿಗಳಲ್ಲೇ ನಾನು ಖುಷಿಯಿಂದಿದ್ದೇನೆ ಎಂದು ತಿಳಿಸಿದ್ದಾರೆ.
Ex-RBI governor Raghuram Rajan