ಬೆಂಗಳೂರು, ಏ.25- ಕಚ್ಚಾವಸ್ತುಗಳನ್ನು ಶೇಖರಿಸಿಡಲಾಗಿದ್ದ ಗೋದಾಮಿನಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದೆ.
ಲಗ್ಗೆರೆಯ ಎಮ್ಇಐ ಲೇಔಟ್ನಲ್ಲಿ ವೆಂಕಟರಾಮ್ ಎಂಬುವರಿಗೆ ಸೇರಿದ ಶ್ರೀ ಗಣೇಶ್ ಕೆಮಿಕಲ್ಸ್ ಗೋದಾಮುಯಿದ್ದು ಇಲ್ಲಿ ಲಕ್ಷಾಂತರ ಮೌಲ್ಯದ ಕಚ್ಚಾಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ರಾತ್ರಿ 10ಗಂಟೆ ಸುಮಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಚ್ಚಾಸಾಮಗ್ರಿಗಳು ಹೊತ್ತು ಉರಿದಿವೆ.
ಬೆಂಕಿಯನ್ನು ಗಮನಿಸಿದ ನಾಲ್ವರು ಕಾರ್ಮಿಕರು ತಕ್ಷಣ ಕಟ್ಟಡದಿಂದ ಹೊರಗೆ ಓಡಿ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ.ಸುದ್ದಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ 18ವಾಹನಗಳೊಂದಿಗೆ ಸ್ಥಳಾಕಾಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿ ತಡರಾತ್ರಿ ವೇಳೆಗೆ ಸಂಪೂರ್ಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.