ಐಪಿಎಲ್ನಲ್ಲಿ ಘರ್ಜಿಸುತ್ತಿದ್ದಾರೆ ಚೆನ್ನೈ ತಲೈವಾ :ವಿಶ್ವ ಕಪ್ನಲ್ಲಿ ಧೋನಿ ಅಬ್ಬರಿಸಿದ್ರೆ ಈ ಸಲ ಕಪ್ ನಮ್ದೆ

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಈಗ ಮತ್ತೆ ಐಪಿಎಲ್ ಮೂಲಕ ಸದ್ದು ಮಾಡಿದ್ದಾರೆ. ಕಳೆದ ವರ್ಷ ಚೆನ್ನೈ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದ ಈ ಚೆನ್ನೈ ತಲೈವಾ ಇದೀಗ ಈ ವರ್ಷವೂ ಇದೇ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.

37 ವರ್ಷದ ಧೋನಿ ಯುವ ಕ್ರಿಕೆಟಿಗರು ನಾಚುವಂತೆ ಆಡುತ್ತಾರೆ. ಅದರಲ್ಲೂ ಚುರಕಿನ ಸ್ಟಂಪಿಂಗ್ ಮಾಡಿ ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇಷ್ಟೆ ಅಲ್ಲದೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಗೇಮ್ ಚೇಂಜರ್ರಾಗಿ ಹೊರ ಹೊಮ್ಮಿದ್ದಾರೆ.

ಸದ್ಯ ಟೀಂ ಇಂಡಿಯಾದ ಮೋಸ್ಟ್ ಸೀನಿಯರ್ ಪ್ಲೇಯರ್ ಅಂದ್ರ ಅದು ಧೋನಿ.10 ವರ್ಷಗಳ ಕಾಲ ನಾಯಕನಾಗಿ ಟೀಂ ಇಂಡಿಯಾವನ್ನ ಧೋನಿ ಯಶಸ್ವಿಯಾಗಿ ಮುನ್ನಡೆಸಿದ್ದರು. ನಾಯಕತ್ವದಿಂದ ಕೆಳಗಿಳಿದ ಮೇಲೂ, ಪಂದ್ಯದ ವೇಳೇ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಸಲಹೆಗಳನ್ನ ನೀಡುತ್ತಿದ್ದಾರೆ. ಈ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಧೋನಿ ಕಥೆ ಮುಗಿದಿದೆ ಎಂಬ ವಿರೋಧಿಗಳ ಟೀಕೆಗಳಿಗೆ, ತಮ್ಮ ಬ್ಯಾಟಿಂಗ್ ಹಾಗು ಕೀಪಿಂಗ್ ಮೂಲಕವೇ ಉತ್ತರ ಕೊಡುತ್ತಿದ್ದಾರೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಧೋನಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧ ಶತಕಗಳನ್ನ ಸಿಡಿಸಿ ಐತಿಹಾಸಿಕ ಏಕದಿನ ಸರಣಿ ಗೆಲುವು ತಂದುಕೊಟ್ಟಿದ್ರು.

ಅದರಲ್ಲೂ ಈ ವರ್ಷ ಧೋನಿ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಅನ್ನೋದನ್ನ ಅಂಕಿಅಂಶಗಳೇ ಹೇಳುತ್ತಿವೆ.

ಈ ವರ್ಷ ಒಟ್ಟು 8 ಪಂದ್ಯಗಳನ್ನಾಡಿರುವ ಧೋನಿ, 81.8ರ ಸರಾಸರಿಯಲ್ಲಿ 4 ಅರ್ಧಶತಕಗಳ ಸಹಿತ 327 ರನ್ ದಾಖಲಿಸಿದ್ದಾರೆ. ಇದರಲ್ಲಿ 22 ಬೌಂಡರಿ ಹಾಗು 6 ಸಿಕ್ಸರ್ಗಲು ಸೇರಿವೆ.

ಐಪಿಎಲ್ನಲ್ಲೂ ಕಮಾಲ್ ಮಾಡಿದ್ದಾರೆ ಮಾಹಿ
ಬರಿ ಟೀಂ ಇಂಡಿಯಾ ಪರ ಮಾತ್ರ ಅಲ್ಲ. ಈ ಬಾರಿಯ ಐಪಿಎಲ್ನಲ್ಲೂ ಧೋನಿ ಕಮಾಲ್ ಮಾಡಿದ್ದಾರೆ. ತಂಡವನ್ನ ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ತಂಡಕ್ಕೆ ಸಂಕಷ್ಟ ಎದುರಾದಾಗ ಧೋನಿ ಜವಾಬ್ದಾರಿ ಹೊತ್ತು ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ದಾರೆ.
ಇನ್ನಿಂಗ್ಸ್ 7
ರನ್ 314
ಸರಾಸರಿ 137.11

7 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಧೋನಿ, 104.66ರ ಸರಾಸರಿಯಲ್ಲಿ 137.11ರ ಸ್ಟ್ರೈಕ್ರೇಟ್ನಲ್ಲಿ 314 ರನ್ ಬಾರಿಸಿದ್ದಾರೆ.

ಅದೇನೆ ಇರಲಿ ಧೋನಿ ತಮ್ಮ ಈ ಅಮೋಘ ಫಾರ್ಮ್ನ ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲೂ ಮುಂದುವರಿಸಲಿ.ಭಾರತಕ್ಕೆ ಮೂರನೇ ವಿಶ್ವಕಪ್ ಗೆದ್ದುಕೊಡಲಿ ಅನ್ನೋದೆ ಕೋಟಿ ಕೋಟಿ ಭಾರತೀಯರ ಆಶಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ