90ನೇ ಜನ್ಮದಿನಕ್ಕೆ ರಾಜ್ಯಾದ್ಯಂತ ರಾಜ್​ಕುಮಾರ್​​ ಹೆಸರಲ್ಲಿ ರಕ್ತದಾನ

ಬೆಂಗಳೂರು:  ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್​ಕುಮಾರ್ ಅವರ ಜನ್ಮದಿನ. ​ ಇಂದು ರಾಜ್​ ಬದುಕಿದ್ದರೆ ಅವರಿಗೆ 90 ವರ್ಷ ತುಂಬುತ್ತಿತ್ತು. ಹಾಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಏಪ್ರಿಲ್​ ತಿಂಗಳು ಬಂತೆಂದರೆ ರಾಜ್​ ಅಭಿಮಾನಿಗಳಿಗೆ ಅದು ಹಬ್ಬವಿದ್ದಂತೆ. ಇಡೀ ತಿಂಗಳು ರಾಜ್​ಕುಮಾರ್​ ಅವರನ್ನು ಸ್ಮರಿಸುತ್ತಾರೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್​ ಸ್ಮಾರಕದ ಬಳಿ ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದಾರೆ.

ನಗರದಲ್ಲಿರುವ ರಾಜ್​ ಪುತ್ಥಳಿಗೆ ವಿಶೇಷ ಗೌರವ ಸಮರ್ಪಿಸಲಾಗುತ್ತದೆ. ಅಲ್ಲದೆ, ರಕ್ತದಾನ, ಅನ್ನದಾನ ಮೊದಲಾದ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ನಾನಾ ಊರುಗಳಿಂದ ರಾಜ್​ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನೇಕ ಕಡೆಗಳಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ