ಕರ್ನಾಟಕದಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ ಶೇ.20.65ರಷ್ಟು ಮತದಾನ!

ಬೆಳಗಾವಿ: ಲೋಕಸಭಾ ಚುನಾವಣೆಯ ನಿಮಿತ್ತ ಕರ್ನಾಟಕದಲ್ಲಿ ನಡೆಯುತ್ತಿರುವ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಬೆಳಗ್ಗೆ 11 ಗಂಟೆ ವೇಳೆಗೆ ಶೇ20.65ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕೋಡಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬೆಳಗಿನಿಂದಲೇ ಮತದಾರರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಇನ್ನು ಇಂದು ಮತದಾನ ನಡೆಯುತ್ತಿರುವ ಎಲ್ಲ 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ20.65ರಷ್ಟು ಮತದಾನವಾಗಿದೆ. ಈ ಪೈಕಿ ಚಿಕ್ಕೋಡಿಯಲ್ಲಿ ಶೇ. 22.54, ಬೆಳಗಾವಿಯಲ್ಲಿ ಶೇ.19.90, ಬಾಗಲಕೋಟೆಯಲ್ಲಿ 21.71, ವಿಜಯಪುರದಲ್ಲಿ ಶೇ.18.99, ಗುಲ್ಬರ್ಗಾದಲ್ಲಿ ಶೇ.18.42, ರಾಯಚೂರಿನಲ್ಲಿ ಶೇ.20.02, ಬೀದರ್ ನಲ್ಲಿ ಶೇ.17.95, ಕೋಪ್ಪಳದಲ್ಲಿ ಶೇ.21.13, ಬಳ್ಳಾರಿ 23.64ರಷ್ಟು ಮತದಾನವಾಗಿದೆ.

ಅಂತೆಯೇ ಹಾವೇರಿ ಶೇ.18.10ರಷ್ಚು, ಧಾರವಾಡದಲ್ಲಿ ಶೇ. 20.30ರಷ್ಚು, ಉತ್ತರ ಕನ್ನಡದಲ್ಲಿ ಶೇ.22.33ರಷ್ಟು. ದಾವಣಗೆರೆಯಲ್ಲಿ 20.33ರಷ್ಟು ಮತ್ತು ಶಿವಮೊಗ್ಗದಲ್ಲಿ ಶೇ.24.58ರಷ್ಟು ಮತದಾನವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ