
ನವದೆಹಲಿ, ಮಾ.22- ಇರಾಕ್ನಲ್ಲಿ 39 ಭಾರತೀಯರ ಹತ್ಯೆ ಪ್ರಕರಣವನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಟಕವಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಇದಕ್ಕಾಗಿ ಫೇಸ್ಬುಕ್ ಡಾಟಾ ಕಳವು ಆರೋಪದ ಕಥೆ ಕಟ್ಟುತ್ತಿದೆ ಎಂದು ಟೀಕಿಸಿದರು.
ಈ ಕುರಿತು ಟ್ವಿಟ್ ಮಾಡಿರುವ ರಾಹುಲ್, ಕೇಂದ್ರ ಸರ್ಕಾರ ಸುಳ್ಳು ಹೇಳಿಕೆಗಳ ಮೂಲಕ ಮಾಧ್ಯಮದವರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂದು ಟೀಕಿಸಿದರು.
ಇರಾಕ್ನಲ್ಲಿ 39 ಭಾರತೀಯರು ಹತ್ಯೆಯಾಗಿರುವುದು ಗಂಭೀರ ಸಮಸ್ಯೆ. ಈ ವಿಷಯವನ್ನು ಇಷ್ಟು ದಿನಗಳ ಕಾಲ ಮುಚ್ಚಿಟ್ಟು ಕೇಂದ್ರ ಸರ್ಕಾರ ಅಮಾನವೀಯವಾಗಿ ವರ್ತಿಸಿದೆ. ಈ ವಿಷಯ ಈಗ ಗಂಭೀರ ಸ್ವರೂಪ ಪಡೆಯುತ್ತಿರುವ ಸಮಯದಲ್ಲಿ ವಿಷಯಾಂತರಕ್ಕಾಗಿ ಕೇಂದ್ರ ಕಾಂಗ್ರೆಸ್ ಮೇಲೆ ಡಾಟಾ ಕಳುವಿನ ಆರೋಪ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.