ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಪ್ರತಿದಿನವೂ ಅಚ್ಚರಿ ಫಲಿತಾಂಶಗಳು ಕಾಣುತ್ತಿವೆ. ಇಂದು ವೀಕೆಂಡ್ ಆಗಿರೋದ್ರಿಂದ ಅಭಿಮಾನಿಗಳ ಪಾಳಿಗೆ ಡಬಲ್ ಧಮಾಕ.
ಇಂದು ಮೊದಲ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಹೋರಾಡಲಿವೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಂಬಾನಿ ಬ್ರಿಗೇಡಿಯರ್ಸ್ ಗೇಮ್ ಪ್ಲಾನ್ ರೂಪಿಸಿದ್ದಾರೆ. ಇನ್ನೂ ಈ ಪಂದ್ಯ ಸೋತೆರೆ ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್ ಸುತ್ತಿ ಕನಸು ನನಸಾಗೇ ಉಳಿಯುತ್ತೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಹಾನೆ ಪಡೆ ಗೆಲುವಿಗಾಗಿ ತನ್ನದೇ ಆದ ಯೋಜನೆ ರೂಪಿಸಿಕೊಂಡಿದೆ.
ಪ್ಲೇ ಆಫ್ ಕನಸಲ್ಲಿ ರಹಾನೆ ಪಡೆ
ಮೊನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಚಕ ಸೋಲು ಅನುಭವಿಸಿದ್ದ ರಾಜಸ್ಥಾನ, ಇಂದಿನ ಮುಂಬೈ ವಿರುದ್ಧದ ಪಂದ್ಯದಲ್ಲಿ ಮತ್ತೆ ಗೆಲುವಿನ ಸಹಿ ಸವಿಯೋ ಕನಸಿನಲ್ಲಿ ರಾಜಸ್ಥಾನ್ ರಾಯಲ್ಸ್ ಇದೆ. ಪಂಜಾಬ್ ವಿರುದ್ಧ ಸೋತಿದ್ರು ಮತ್ತೆ ಪುಟಿದೇಳೋ ಆತ್ಮವಿಶ್ವಾಸದಲ್ಲಿ ರಹಾನೆ ಪಡೆಯಿದೆ. ಆರ್ಆರ್ ಬ್ಯಾಟ್ಸ್ಮನ್ಗಳಾದ ಅಜಿಂಕ್ಯಾ ರಹಾನೆ, ಜಾಸ್ ಬಟ್ಲರ್, ರಾಹುಲ್ ತ್ರಿಪಾಠಿ ಫಾರ್ಮ್ನಲ್ಲಿದ್ದಾರೆ. ಸ್ಟುವರ್ಟ್ ಬಿನ್ನಿ, ಟರ್ನರ್ ಇಂದಿನ ಪಂದ್ಯದಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ. ಟ್ರಂಪ್ ಕಾರ್ಡ್ ಜೋರ್ಫ ಆರ್ಚರ್, ಜೈದೇವ್ ಉನದ್ಕಟ್, ಧವಳ್ ಕುಲಕರ್ಣಿ ಎದುರಾಳಿ ರನ್ ದಾಹಕ್ಕೆ ಬ್ರೇಕ್ ಹಾಕಬಲ್ಲರು. ಶ್ರೇಯಸ್ ಗೋಪಾಲ್, ಮ್ಯಾಜಿಕ್ ಸ್ಪೆಲ್ ಮಾಡಿದ್ರೆ ರಾಜಸ್ಥಾನ ಗೆಲುವು ಸಾಧಿಸೋದ್ರಲ್ಲಿ ಅನುಮಾನವೇ ಇಲ್ಲ..
ಹ್ಯಾಟ್ರಿಕ್ ಗೆಲುವಿನ ಕನಸಲ್ಲಿ ಮುಂಬೈ ಇಂಡಿಯನ್ಸ್
ರಾಜಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂದಿನ ಪಂದ್ಯದಲ್ಲಿ ಮಣಿಸೋ ಲೆಕ್ಕಚಾರದಲ್ಲಿದೆ. ಅಲ್ದೇ ಆರ್ಸಿಬಿ, ಡೆಲ್ಲಿ ವಿರುದ್ಧ ಸತತ 2 ಗೆಲುವು ಸಾಧಿಸಿರೋ ಮುಂಬೈ ಹ್ಯಾಟ್ರಿಕ್ ಜಯದ ಕನಸಿನಲ್ಲಿದೆ. ಈ ಪಂದ್ಯ ಗೆದ್ದು ಪ್ಲೇಆಪ್ ಹಾದಿ ಸುಗಮಗೊಳಿಸಿಕೊಳ್ಳುವ ಲೆಕ್ಕಚಾರ ಮುಂಬೈ ಇಂಡಿಯನ್ಸ್ ತಂಡದ್ದು, ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅಲ್ಲದೆ ಆಲ್ರೌಂಡರ್ಗಳಾದ ಕಿರನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ, ಬೆನ್ ಕಟ್ಟಿಂಗ್ ಸಿಡಿದೆದ್ರೆ ಎದುರಾಳಿಗಳು ಉಡೀಸ್ ಆಗೋದು ಗ್ಯಾರಂಟಿ. ಬೌಲಿಂಗ್ ಡಿಪಾರ್ಟ್ಮೆಂಟ್ ಕೂಡ ಅಷ್ಟೇ ಬಲಿಷ್ಠವಾಗಿದ್ದು ಎದುರಾಳಿಗಳ ಬ್ಯಾಟಿಂಗ್ ಶಕ್ತಿಯನ್ನೇ ಬುಡಮೇಲು ಮಾಡೋ ತಾಕತ್ತು ಹೊಂದಿದೆ. ಜಸ್ಪ್ರೀತ್ ಬೂಮ್ರಾ, ಮಲಿಂಗಾ, ಬೆನ್ ಕಟ್ಟಿಂಗ್ ಮುಂಬೈ ತಂಡದ ಬೌಲಿಂಗ್ ಸ್ಟ್ರೆಂಥ್ ಆಗಿದೆ. ಸ್ಪಿನ್ನರ್ ದೀಪಕ್ ಚಹರ್ ತಮ್ಮ ಕೈಚಳಕ ತೋರಿಸೋಕೆ ಉತ್ಸುಕರಾಗಿದ್ದಾರೆ.