ಇಂದು ಕೆಕೆಆರ್ ವಿರುದ್ಧ ಆರ್ಸಿಬಿಗೆ ಸೇಡಿನ ಸಮರ : ಮಾನ ಉಳಿಸಿಕೊಳ್ಳಲು ವಿರಾಟ್ ಪಡೆ ಹೋರಾಟ

12ನೇ ಅವೃತ್ತಿಯ ಐಪಿಎಲ್ ಟೂರ್ನಿ ಅರ್ಧ ದಾರಿ ಸಾಗಿದೆ. ಕಳಪೆ ಪ್ರದರ್ಶನದಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರೋ ವಿರಾಟ್ ಪಡೆ, ಮಾನ ಉಳಿಸಿಕೊಳ್ಳಲು ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಹೋರಾಡಲಿದೆ.. ಈಡನ್ ಗಾರ್ಡನ್ಸ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗ್ತಿದ್ದು, ಇನ್ನೂ ಚಿನ್ನಸ್ವಾಮಿ ಅಂಗಳದಲ್ಲಿನ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ವಿರಾಟ್ ಯೋಜನೆ ರೂಪಿಸಿದ್ದಾರೆ. ಇನ್ನೂ ಪ್ಲೇ ಆಫ್ ಮೇಲೆ ಕಣ್ಣಿಟ್ಟಿರೋ ಡಿ.ಕೆ.ಗ್ಯಾಂಗ್ ತವರಿನ ಅಂಗಳದಲ್ಲಿ ಗೆಲ್ಲೋ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯುತ್ತಿದೆ..

ಸತತ ಆರು ಪಂದ್ಯಗಳ ಸೋಲಿನ ನಂತರ ಗೆಲುವು ಕಂಡಿದ್ದ ಆರ್ಸಿಬಿ ಮತ್ತೆ ಮುಂಬೈ ವಿರುದ್ದ ಸೋಲಿನ ಮುಖಭಂಗ ಅನುಭವಿಸೋ ಮೂಲಕ ತನ್ನ ಪ್ಲೇ ಆಫ್ ಕನಸು ಭಗ್ನಗೊಂಡಿದೆ.. ಹೀಗಾಗಿ ಇನ್ನುಳಿದಿರುವ ಪಂದ್ಯಗಳನ್ನಾದರೂ ಗೆದ್ದು ಟೂರ್ನಿಗೆ ಗುಡ್ಬೈ ಹೇಳಬೇಕಿದೆ.

ಕೆಕೆಆರ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಆರ್ಸಿಬಿ
ತವರಿನಲ್ಲಿ ಕೋಲ್ಕತ್ತಾ ವಿರುದ್ಧ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಕೈಚೆಲ್ಲಿದ್ದ ಆರ್ಸಿಬಿ, ಇಂದು ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಇನ್ನೂ ಈ ಪಂದ್ಯವನ್ನು ಪ್ರತೀಕಾರವಾಗಿ ಸ್ವೀಕರಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟಿಂಗ್ ಶಕ್ತಿಯುತವಾಗಿದ್ದರು ನೈಜ ಆಟ ಪ್ರದರ್ಶಿಸುವಲ್ಲಿ ಎಡವುತ್ತಿದ್ದಾರೆ. ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ರು ದೊಡ್ಡ ಇನ್ನಿಂಗ್ಸ್ ಕಟ್ಟೋಕೆ ಆಗ್ತಿಲ್ಲ. ಮುಂಬೈ ವಿರುದ್ಧ ಅಬ್ಬರಿಸಿದ್ದ ಡಿ;ವಿಲಿಯರ್ಸ್‌, ಮೊಹಿನ್ ಅಲಿ, ಇಂದು ಮತ್ತೆ ಅದೇ ಆಟ ಪ್ರದರ್ಶಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನೂ ತಂಡದಲ್ಲಿ ಸ್ಥಾನ ಪಡೆದ್ರೂ ಪವನ್ ನೇಗಿ ತಮ್ಮ ತಾಕತ್ತು ಪ್ರದರ್ಶಿಸುವಲ್ಲಿ ವಿಫಲರಾಗುತ್ತಿದ್ದಾರೆ..

ಆರ್ಸಿಬಿಗೆ ರಸ್ಸೆಲ್ ಮಸಲ್ ಪವರ್ ಭಯ..!
ಹೌದು ಆರ್ಸಿಬಿಗೆ ರಸ್ಸೆಲ್ ಮಸಲ್ ಪವರ್ ಭಯ ಶುರುವಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರಸ್ಸೆಲ್ ಸಿಡಿಲಬ್ಬರದ ಬ್ಯಾಟಿಂಗ್ಗೆ ಆರ್ಸಿಬಿ ಧೂಳಿಪಟವಾಗಿತ್ತು. ಹೀಗಾಗಿ ರಸ್ಸೆಲ್ ಬ್ಯಾಟಿಂಗ್ ಅಂದ್ರೆ ಆರ್ಸಿಬಿ ಆಟಗಾರರು ಕನಸಿನಲ್ಲೂ ಬೆಚ್ಚಿ ಬೀಳ್ತಾರೆ.

ಆರ್ಸಿಬಿ ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಉತ್ತಮ ದಾಳಿಕೋರರಿದ್ರು ಕಾಗದದ ಮೇಲಿನ ಹುಲಿಗಳಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪದೇ ಪದೇ ಬದಲಾವಣೆ ಮಾಡಿದ್ರು ದೊಡ್ಡ ಮೊತ್ತವನ್ನು ಕಾಪಾಡಿಕೊಳ್ಳಲು ಬೌಲರ್ಗಳಿಂದ ಆಗ್ತಿಲ್ಲ.. ಅಲ್ದೇ ಪಂದ್ಯದಿಂದ ಪಂದ್ಯಕ್ಕೆ ಬೌಲರ್ಗಳು ದುಬಾರಿ ಆಗ್ತಿದ್ದಾರೆಯೇ ಹೊರತು ಶೈನ್ ಆಗ್ತಿಲ್ಲ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ನಿದ್ದೆ ಗೆಡಿಸಿದೆ. ವೇಗಿಗಳಾದ ಉಮೇಶ್ ಯಾದವ್, ಮೊಹಮದ್ ಸಿರಾಜ್, ನವದೀಪ್ ಸೈನಿ ಲಯ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. ಚೋಟಾ ಭೀಮ್ ಯಜುವೇಂದ್ರ ಚಹಲ್ಗೆ ಸಾಥ್ ನೀಡುವಂತ ಮತ್ತೊಬ್ಬ ಸ್ಪಿನ್ನರ್ ತಂಡದಲ್ಲಿ ಇಲ್ಲದಿರೋದ್ರ ಜೊತೆಗೆ ಕಳಪೆ ಫೀಲ್ಡಿಂಗ್ ರಾಯಲ್ ಚಾಲೆಂಜರ್ಸ್ಗೆ ಮುಳುವಾಗುತ್ತಿದೆ. ಹೀಗಾಗಿ ಆರ್ಸಿಬಿ ಗೆಲ್ಲಲು ಹೊಸ ಗೇಮ್ಪ್ಲಾನ್ ಮೂಲಕ ಕಣಕ್ಕಿಳಿಯಬೇಕಿದೆ..

ಗೆಲುವಿನ ಟ್ರ್ಯಾಕ್ಗೆ ಮರಳಲು ಕೆಕೆಆರ್ ಪ್ಲಾನ್
ಇನ್ನೂ ಟೂರ್ನಿಯಲ್ಲಿ 8 ಪಂದ್ಯಗಳ ಪೈಕಿ 4 ಪಂದ್ಯಗಳನ್ನ ಗೆದ್ದಿರೋ ಕೆಕೆಆರ್ ಫ್ಲೇಆಫ್ ಹಾದಿ ಸುಗಮವಾಗಿಸಿಕೊಳ್ಳಲು ಈ ಪಂದ್ಯ ಮಹತ್ವದ್ದಾಗಿದೆ. ಕಳೆದ ಮೂರು ಪಂದ್ಯಗಳಿಂದ ಗೆಲುವು ಕಾಣುವಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿಫಲರಾಗಿದ್ದಾರೆ. ಹ್ಯಾಟ್ರಿಕ್ ಸೋಲಿನ ಕಹಿ ಮರೆತು ಗೆಲ್ಲುವ ಆತ್ಮವಿಶ್ವಾಸದಿಂದ ಶಾರುಖ್ ಹುಡುಗ್ರು ಕಣಕ್ಕಿಳಿಯುತ್ತಿದ್ದಾರೆ. ಕ್ರಿಸ್ ಲೀನ್, ರಾಬಿನ್ ಉತ್ತಪ್ಪ, ನಾಯಕ ದಿನೇಶ್ ಕಾರ್ತಿಕ್, ಶುಭ್ಮನ್ಗಿಲ್ ಕೆಕೆಆರ್ ತಂಡದ ಬ್ಯಾಟಿಂಗ್ ಸ್ಟಾರ್ಸ್ ಆಗಿದ್ಧಾರೆ. ಅಲ್ರೌಂಡರ್ ರಸೆಲ್ ಬೌಲಿಂಗ್ ಸಿಡಿದೆದ್ರೆ ಮತ್ತೆ ಆರ್ಸಿಬಿ ಉಡೀಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ…ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಬಲಿಷ್ಠವಾಗಿದೆ.

ಲೂಕಿ ಫರ್ಗ್ಯೂಸನ್, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸ್ಪಿನ್ನರ್ಗಳಾದ ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್, ಸುನೀಲ್ ನರೈನ್ ಬ್ಯಾಟ್ಸ್ಮನ್ಗಳ ರನ್ದಾಹ ನಿಯಂತ್ರಿಸುವ ಜೊತೆಗೆ ತಂಡ ಸಂಕಷ್ಟದಲ್ಲಿದ್ದಾಗ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಆರ್ಸಿಬಿ -ಕೆಕೆಆರ್ ಮುಖಾಮುಖಿ
ರಾಯಲ್ ಚಾಲೆಂಜರ್ಸ್- ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಕೋಲ್ಕತ್ತಾ ನೈಟ್ರೈಡರ್ಸ್ 15 ಪಂದ್ಯಗಳಲ್ಲಿ ಗೆದ್ದಿದ್ರೆ. ರಾಯಲ್ ಚಾಲೆಂಜರ್ಸ್ ಕೇವಲ 9 ಪಂದ್ಯಗಳನ್ನ ಮಾತ್ರ ಗೆದ್ದಿದೆ.

ಒಟ್ನಲ್ಲಿ ಟೂರ್ನಿಯಲ್ಲಿ ಸೋಲಿನ ಕಹಿಯನ್ನೇ ಹೆಚ್ಚು ಅನುಭವಿಸಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯದ ಸಿಹಿ ಸವಿಯುವ ಹುಡುಕಾಟದಲ್ಲಿದ್ರೆ, ಅತ್ತ ಹಾಗೇದ್ರೂ ಮಾಡಿ ಆರ್ಸಿಬಿ ಮೇಲೆ ಸವಾರಿ ಮಾಡೋ ರಣತಂತ್ರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಇದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ