ರಾಯ್ ಪುರ: ಲೋಕಸಭೆ ಚುನಾವಣೆ ನಡೆಯಿತ್ತಿದ್ದ ವೇಳೆಯೇ ಛತ್ತೀಸ್ ಘಡದಲ್ಲಿ ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಎನ್ಕೌಂಟರ್ ನಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ಛತ್ತೀಸ್ ಘಡದ ಧನಿಕರ್ಕಾ ಪ್ರಾಂತ್ಯದ ಕಾವ್ಕೊಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ಕೌಂಟರ್ ನಡೆದಿದ್ದು, ಈ ವೇಳೆ ಭದ್ರತಾ ಪಡೆಗಳ ಗುಂಡೇಟಿಗೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಧನಿಕರ್ಕಾ ಪ್ರಾಂತ್ಯದಲ್ಲಿ ನಕ್ಸಲರು ಅಡಗಿರುವ ಕುರಿತು ಮಾಹಿತಿ ಪಡೆದ ಜಿಲ್ಲಾ ಮೀಸಲು ಪಡೆಯ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ತೀವ್ರ ಗುಂಡಿನ ಚಕಮಕಿಯಾಗಿದೆ. ಈ ವೇಳೆ ಹಲವು ಸಿಬ್ಬಂದಿಗಳಿಗೂ ಗಾಯಗಳಾಗಿದ್ದು, ಈ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ.
ಹಾಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಛತ್ತೀಸ್ ಘಡದ ಕಾಂಕರ್, ರಾಜ್ನಾಂದಗಾವ್ ಮತ್ತು ಮಹಾಸಮುಂದ್ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಇದೇ ಏಪ್ರಿಲ್ 23ರಂದು ಮತದಾನ ನಡೆಯಲಿದೆ.
Two Naxals killed in encounter with police in Chhattisgarh