ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಇಂದು ಹೈವೋಲ್ಟೇಜ್ ಕದನ ನಡೆಯಲಿದೆ. ಐಪಿಎಲ್ನಲ್ಲಿ ಮದಗಜಗಳಂತೆ ಹೋರಾಡುತ್ತಾ ಬಂದಿರುವ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮತ್ತೆ ಮುಖಾಮುಖಾಯಾಗುತ್ತಿವೆ. ವಾಂಖೆಡೆ ಅಂಗಳದಲ್ಲಿ ನಡೆಯುವ ಮಹಾ ಕದನದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಐಪಿಎಲ್ನಲ್ಲಿ ಬಲಿಷ್ಠ ತಂಡಗಳೆಂದೆ ಗುರುತಿಸಿಕೊಂಡಿರುವ ಆರ್ಸಿಬಿ ಮತ್ತು ಆತಿಥೇಯ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ಹೋರಾಡಲಿವೆ. ಮೊನ್ನೆ ಆರ್ಸಿಬಿ ಪಂಜಾಬ್ ವಿರುದ್ಧ ಗೆದ್ದಿದ್ರೆ ಇತ್ತ ಮುಂಬೈ ಇಂಡಿಯನ್ಸ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ತವರಿನಲ್ಲೆ ಸೋತು ಭಾರೀ ಮುಖಭಂಗ ಅನುಭವಿಸಿತ್ತು.
ಮೊದಲ ಪಂದ್ಯ ಗೆದ್ದು ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡ ಆರ್ಸಿಬಿ
ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಕೊನೆಗೂ ಸೋಲಿನ ಚಕ್ರವ್ಯೂಹದಿಂದ ಹೊರ ಬಂದಿದೆ. ಸತತ ಆರು ಸೋಲುಗಳನ್ನ ಕಂಡಿದ್ದ ಆರ್ ಸಿಬಿ ಮೊನ್ನೆ ಮೊಹಾಲಿ ಅಂಗಳದಲ್ಲಿ ಪಂಜಾಬ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್ , ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರು ಡಿಪಾರ್ಟ್ಂಮೆಂಟ್ಗಳಲ್ಲಿ ಜಬರ್ದಸ್ತ್ ಪರ್ಫಾಮನ್ಸ್ ಕೊಟ್ಟ ಆರ್ಸಿಬಿ ಟೂರ್ನಿಯಲ್ಲಿ ಮೊದಲ ಗೆಲುವಿನ ಕೇಕೆ ಹಾಕಿತು.
ಮೊದಲ ಗೆಲುವಿನಿಂದ ಆರ್ಸಿಬಿ ಕ್ಯಾಂಪ್ನಲ್ಲಿ ಹೊಸ ಹುಮ್ಮಸ್ಸು
ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್ಸಿಬಿಗೆ ಹೊಸ ಹುಮ್ಮಸ್ಸು ಬಂದಿದೆ. ಆಡಿದ ಆರು ಪಂದ್ಯಗಳಲ್ಲೆ ಎಷ್ಟೆ ಪ್ರಯತ್ನಪಟ್ಟರೂ ಏನೇ ಮಾಡಿದ್ರು ಆರ್ಸಿಬಿ ಸೋಲು ಕಾಣುತ್ತಿತ್ತು. ಇದೀಗ ಏಳನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದು ಸೋಲಿನ ದಂಡಯಾತ್ರಗೆ ಬ್ರೇಕ್ ಹಾಕಿದೆ. ಹೀಗಾಗಿ ಆರ್ಸಿಬಿ ಕ್ಯಾಂಪ್ನಲ್ಲಿ ಈಗ ವಾತಾವರಣ ಸಂಪೂರ್ಣವಾಗಿ ಬದಲಾಗಿದ್ದು ಇನ್ನುಳಿದಿರುವ ಎಲ್ಲ ಪಂದ್ಯಗಳನ್ನ ಗೆಲ್ಲುವ ವಿಶ್ವಾಸದಲ್ಲಿದೆ.
ಆರ್ಸಿಬಿಗೆ ಇಂದು ಅಂಬಾನಿ ಬ್ರಿಗೇಡಿಯರ್ಸ್ ಸವಾಲು
ಮೊದಲು ಪಂದ್ಯ ಗೆದ್ದು ಬೀಗಿರುವ ವಿರಾಟ್ ಪಡೆಗೆ ಅಂಬಾನಿ ಬ್ರಿಗೇಡಿಯರ್ಸ್ ಸವಾಲು ಹಾಕಿದೆ. ಆರ್ ಸಿಬಿ ವಿರುದ್ಧ ಅಂಪೈರ್ ಯಡವಟ್ಟಿನಿಂದ ಗೆದ್ದಿದ್ದ ಮುಂಬೈ ತಂಡ ಇಂದು ಆರ್ಸಿಬಿ ಎದುರು ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸಲು ಸಜ್ಜಾಗಿದೆ. ವಾಂಖೆಡೆ ಅಂಗಳ ಬ್ಯಾಟಿಂಗ್ ಪಿಚ್ ಆಗಿರೋದ್ರಿಂದ ಆರ್ಸಿಬಿಗೆ ಇದು ನೆರವಾಗಲಿದೆ. ಇತ್ತ ರೋಹಿತ್ ಪಡೆ ಮೊನ್ನೆ ರಾಜಸ್ತಾನ ವಿರುದ್ಧ ಸೋತು ಆತ್ಮವಿಶ್ವಾಸ ಕಳೆದುಕೊಂಡಿದೆ.
ಸೇಡು ತೀರಿಸಿಕೊಳ್ಳಲು ಕಾದು ಕುಂತಿದೆ ಕೊಹ್ಲಿ ಪಡೆ
ಇತ್ತೀಚೆಗೆ ಚಿನ್ನಸ್ವಾಮಿ ಅಂಗಳದಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಬೇಕಿತ್ತು. ಆದರೆ ಕೊನೆಯ ಎಸತವನ್ನ ಅಂಪೈರ್ ನೋ ಬಾಲ್ ಕೊಡದೇ ಇದ್ದಿದ್ದು ಆರ್ಸಿಬಿ ಸೋಲಿನಲ್ಲಿ ಸಿಲುಕುವಂತಾಯಿತು. ಈಗಾಗಿ ಅಂದಿನ ಸೋಲಿನ ಸೇಡನ್ನ ಇಂದು ತೀರಿಸಿಕೊಳ್ಳಲು ಆರ್ಸಿಬಿ ಹೋರಾಡಲಿದೆ. ಕ್ಯಾಪ್ಟನ್ ಕೊಹ್ಲಿ ಮತ್ತು ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆಲ್ರೌಂಡರ್ ಸ್ಟೋಯ್ನಿಸ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಭರವಸೆ ಮೂಡಿಸಿದ್ದಾರೆ.
ಇಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಆಡುವ ಸಾಧ್ಯತೆ ಇದ್ದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಜೊತೆಗೆ ಯಜ್ವಿಂದರ್ ಚಹಲ್ ಸೂಪರ್ ಸ್ಪೆಲ್ ಮಾಡುತ್ತಿದ್ದು ಬಲಿಷ್ಠ ಮುಂಬೈ ಎದುರು ಬೌಲಿಂಗ್ ಸಾಮಥ್ಯ ಪ್ರೂವ್ ಮಾಡಬೇಕಿದೆ.
ತವರಿನಲ್ಲಿ ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸುತ್ತಿದೆ ಮುಂಬೈ
ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ಗೆ ಇಂದು ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ತವರು ಅಂಗಳದಲ್ಲಿ ಪಂಜಾಬ್ ವಿರುದ್ಧ ರೋಚಕವಾಗಿ ಗೆದ್ದಿದ್ದ ಅಂಬಾನಿ ಬ್ರಿಗೇಡಿಯರ್ಸ್ ನಂತರ ರಾಜಸ್ತಾನ ವಿರುದ್ಧ ಅಚ್ಚರಿ ರೀತಿಯಲ್ಲಿ ಸೋತು ಶಾಕ್ ಕೊಟ್ಟಿತ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಓಪನರ್ ಡಿ; ಕಾಕ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ . ಆದರೆ ಮಿಡ್ಲ್ ಆರ್ಡರ್ನಲ್ಲಿ ಕಿರಾನ್ ಪೋಲಾರ್ಡ್ ಸಿಡಿಯುತ್ತಿಲ್ಲ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಸ್ಟಾರ್ ಬೌಲರ್ಸ್ಗಳಾದ ಜಸ್ಪ್ರೀತ್ ಬುಮ್ರಾ, ಜಾಸನ್ ಬೆರನ್ಡ್ರೋಫ್, ಪಾಂಡ್ಯ ಬ್ರದರ್ಸ್ ಹೇಳಿಕೊಳ್ಳುವಂತಹ ಪರ್ಫಾಮನ್ಸ್ ಕೊಡುತ್ತಿಲ್ಲ.
ಒಟ್ನಲ್ಲಿ ಇಂದು ಬಲಿಷ್ಠ ತಂಡಗಳ ಕಾದಾಟ ನಡೆಯಲಿದ್ದು ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದೆ.